25 ಸಾವಿರ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಕಡು ಭ್ರಷ್ಟ ಪೊಲೀಸ್ ಠಾ ಹೆಡ್ ಕಾನ್ಸ್ಟೇಬಲ್
ಬೀಳಗಿ-ಬಾಗಲಕೋಟೆ ಜಿಲ್ಲೆಯ ಬೀಳಗಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ನಡೆದಿದೆ.
ಹೆಡ್ ಕಾನ್ಸ್ಟೇಬಲ್ ಅರ್ಜುನ್ ಸಾಲಾಪೂರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಹೆಡ್ ಕಾನ್ಸ್ಟೇಬಲ್ ಅರ್ಜುನ್ ಸಾಲಾಪೂರ ಅಪಘಾತಕ್ಕೊಳಗಾಗಿದ್ದ ಬೈಕ್ ರಿಲೀಸ್ ಮಾಡಲು 25 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು.
ಈ ಬಗ್ಗೆ ಬೈಕ್ ಮಾಲೀಕ ಸಂತೋಷ್ ಕೆಂಪಲಿಂಗನ್ನವರ ಎನ್ನುವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು.
25 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಇದ್ದಾಗಲೇ ಈ ದಾಳಿ ನಡೆದಿದೆ.
ನಂತರ ಅದೇ ಠಾಣೆಯಲ್ಲಿಯೇ ಹೆಡ್ ಕಾನ್ಸ್ಟೇಬಲ್ ವಿಚಾರಣೆ ನಡೆಸಲಾಗಿದೆ. ಲೋಕಾಯುಕ್ತ ಎಸ್ಪಿ ಶಂಕರ್ ರಾಗಿ ನೇತೃತ್ವದಲ್ಲಿ ಈ ದಾಳಿ ನಡೆದಿತ್ತು