ಅಂಕೋಲ ಬಸ್ ನಿಲ್ದಾಣದಲ್ಲಿಟ್ಟ ಬುಲೆಟ್ ಬೈಕ್ ಕಳ್ಳತನ… ಡ್ಯೂಟಿಗೆ ಹೋಗಿ ಬರುವಷ್ಟರಲ್ಲಿ ಬುಲೆಟ್ ಬೈಕ್ ಹೊತ್ತೊಯ್ದ ಕಳ್ಳರು ಯಾರು?. ಸಿಸಿಟಿವಿಯನ್ನು ಅಳವಡಿಸಲು ನಿರ್ಲಕ್ಷ ವಹಿಸಿದ ಸಾರಿಗೆ ಸಂಸ್ಥೆ… ಈ ಬಗ್ಗೆ ಗಮನಹರಿಸುವರೆ ಮಾನ್ಯ ಶಾಸಕರು.
ಅಂಕೋಲಾ :s ಪ್ರತಿನಿತ್ಯ ಅಲಗೇರಿ ಗ್ರಾಮದ ಸತಿ ಪತಿಗಳಿಬ್ಬರು ಬುಲೆಟ್ ಬೈಕ್ನನ್ನು ಬೆಳಿಗ್ಗೆ ಅಂಕೋಲಾ ಬಸ್ ನಿಲ್ದಾಣದಲ್ಲಿ ಪಾರ್ಕಿಂಗ್ ಮಾಡಿ ಕಾರವಾರಕ್ಕೆ ಕೆಲಸಕ್ಕೆ ತೆರಳುತ್ತಿದ್ದರು. .
ಎಂದಿನಂತೆ ದಿನಾಂಕ 18/03/2024 ರಂದು ತಮ್ಮ ಡ್ಯೂಟಿಯನ್ನು ಮುಗಿಸಿ ಸಂಜೆ 6 ಗಂಟೆಗೆ ಬಸ್ ನಿಲ್ದಾಣದಲ್ಲಿ ಬುಲೆಟ್ ಬೈಕ ಇಟ್ಟಿರುವ ಸ್ಥಳಕ್ಕೆ ಬಂದು ನೋಡಿದಾಗ ಅಲ್ಲಿ ಬೈಕ್ ಇಲ್ಲದಿರುವುದನ್ನು ನೋಡಿ ಕಂಗಾಲಾಗಿದ್ದಾರೆ… ಕಷ್ಟಪಟ್ಟು ದುಡಿದು ತೆಗೆದುಕೊಂಡ ಬೈಕ್ ಅನ್ನು ಕಳೆದುಕೊಂಡ ದುಃಖದಲ್ಲಿ ದಂಪತಿಗಳು ಕಣ್ಣೀರನ್ನು ಹಾಕಿದ್ದಾರೆ.
ಬಸ್ ನಿಲ್ದಾಣದ ಎಲ್ಲಾ ಕಡೆ ಹುಡುಕಿ ತಮ್ಮ ಬೈಕ ಎಲ್ಲೋ ಸಿಗದೆ … ತಮ್ಮ ಬೈಕ ಕಳು ವಾಗಿದೆ ಎಂದು ಖಾತ್ರಿ ಯಾದಾಗ ಅಂಕೋಲಾ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ.. ತಕ್ಷಣ ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿ ಪುನೀತ್ ರವರು ಸತಿಪತಿಗಳ ಹೇಳಿಕೆಯನ್ನು ಪಡೆದುಕೊಂಡು ಬೈಕನ್ನು ಹುಡುಕುವ ಪ್ರಯತ್ನವನ್ನು ಮಾಡಿದ್ದಾರೆ. ಈ ಬಗ್ಗೆ ದಂಪತಿಗಳು ಅಂಕೋಲಾ ಠಾಣೆಗೆ ಹೋಗಿ ದೂರೂ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಅಂಕೋಲ ನಗರದ ಹೃದಯ ಭಾಗದಲ್ಲಿರುವ ಹೊಸ ಬಸ್ ನಿಲ್ದಾಣವನ್ನು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಆದರೆ, ಈ ಆಧುನಿಕ ಸೌಕರ್ಯಗಳೊಂದಿಗೆ ನಿರ್ಮಿತವಾದ ಬಸ್ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಉಲ್ಲೇಖಿಸದೆ ಇರುವುದು ಗಂಭೀರ ಆತಂಕವನ್ನು ಹುಟ್ಟುಹಾಕಿದೆ.
ಸಿಸಿಟಿವಿ ಕ್ಯಾಮೆರಾಗಳ ಅನುಪಸ್ಥಿತಿಯಿಂದಾಗಿ, ಬೈಕ್ ಕಳ್ಳತನದಂತಹ ಘಟನೆಗಳು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿವೆ.
ಲಕ್ಷಾಂತರ ರೂಪಾಯಿ ಬೆಲೆಬಾಳುವ ಬೈಕುಗಳು ಕದಿಯಲ್ಪಡುತ್ತಿರುವ ಕುರಿತು ಸಾಕಷ್ಟು ಪ್ರಕರಣಗಳು ಅಂಕೋಲಾ ಬಸ್ ನಿಲ್ದಾಣ ದಿಂದಲೇ ವರದಿಯಾಗಿದೆ.
ಪೊಲೀಸರಿಗೆ ಸಹ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ತೊಂದರೆಯಾಗುತ್ತಿದೆ. ಸಿಸಿಟಿವಿ ಕ್ಯಾಮೆರಾಗಳ ಅಭಾವದಿಂದ ಪ್ರಕರಣಗಳ ತನಿಖೆಗೆ ಪ್ರತಿಬಂಧಕಗಳಾಗುತ್ತಿವೆ. ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವುದನ್ನು ಗಮನಿಸಿದ ಕಳ್ಳರಿಗೆ ಮತಷ್ಟು ಬೈಕ್ ಗಳನ್ನು ಕಳ್ಳ ತನ ಮಾಡಿ ಹೊತ್ತೊಯಲು ಬಸ್ ನಿಲ್ದಾಣ ವರದಾನವಾಗಿದೆ..
ಕನಸಿನ ಭಾರತ ಪತ್ರಿಕೆಯೊಂದಿಗೆ ಮಾತನಾಡಿದ ಪೊಲೀಸರು, ಅಂಕೋಲಾ ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳು ಇದ್ದರೆ ತನಿಖೆಗೆ ತುಂಬಾ ಸಹಕಾರಿಯಾಗುತ್ತಿತ್ತು. ಯಾರಾದರೂ ಸಿಸಿಟಿವಿ ಅಳವಡಿಸಲು ದಾನಿಗಳು .ಪ್ರಾಯೋಜಕರು ಮುಂದೆ ಬಂದಲ್ಲಿ ತುಂಬಾ ಸಹಕಾರಿಯಾಗುತ್ತಿತ್ತು.
ಕೆ ಎಸ್ ಆರ್ ಟಿ ಸಿ ಅಂಕೋಲಾ ಅಧಿಕಾರಿಗಳಿಗೆ ಎಷ್ಟೇ ಬಾರಿ ಸಿಸಿಟಿವಿ ಅಳವಡಿಸುವಂತೆ ಹೇಳಿದರು ಲಿಖಿತವಾಗಿ ಅರ್ಜಿ ನೀಡಿದರು ಕೂಡ ನಿರ್ಲಕ್ಷ್ಯ ಧೋರಣೆ ತೋರುತ್ತಿದ್ದಾರೆ. ಬೈಕ್ ಕಳ್ಳರನ್ನು ಹಿಡಿಯೋದೆ ಸವಾಲಿನ್ ಕೆಲಸವಾಗಿದೆ .ಎಂದು ಪೊಲೀಸ್ ಸಿಬ್ಬಂದಿ ಆಸಿಫ್ ಮತ್ತು ಶ್ರೀಕಾಂತ್ ರವರು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ಬಸ್ ನಿಲ್ದಾಣದ ಘಟಕ ವ್ಯವಸ್ಥಾಪಕರು ಈ ಲೋಪ ದೋಷಗಳ ಬಗ್ಗೆ ವಿವರಣೆ ನೀಡಬೇಕಾಗಿದೆ. ಭದ್ರತಾ ಕಾಳಜಿಗಳನ್ನು ಪರಿಗಣಿಸದೆ ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಿರುವುದು ಖಂಡನೀಯವಾಗಿದೆ. ನಾಗರಿಕರ ಆಸ್ತಿಗಳನ್ನು ರಕ್ಷಿಸುವುದು ಪ್ರಾಮುಖ್ಯವಾಗಿದ್ದರೂ, ಇದನ್ನು ಲಕ್ಷ್ಯಕ್ಕೆ ಪಡೆಯದೆ ಹೋಗಿರುವುದು ದುರಂತಕರವಾಗಿದೆ.
ಈ ಸಮಸ್ಯೆಗೆ ಪರಿಹಾರವಾಗಿ, ಬಸ್ ನಿಲ್ದಾಣದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಜರುರಾಗಿ ಅಳವಡಿಸಬೇಕಾಗಿದೆ.ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರು ಈ ಬಗ್ಗೆ ಗಮನ ಹರಿಸಬೇಕಾಗಿದೆ ಇದರಿಂದಾಗಿ ಅಪರಾಧಗಳು ತಡೆಯಲ್ಪಡುವುದಲ್ಲದೆ, ತನಿಖೆಗಳಿಗೆ ಸಹಾಯವಾಗುತ್ತದೆ. ಭದ್ರತಾ ಪಡೆಗಳನ್ನು ನಿಯೋಜಿಸುವುದರೊಂದಿಗೆ, ಬಸ್ ನಿಲ್ದಾಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಸ್ತು ನಡೆಸುವಂತೆ ವ್ಯವಸ್ಥೆ ಮಾಡಬೇಕು.
ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಿರಬೇಕು. ಹೊಸ ಬಸ್ ನಿಲ್ದಾಣವನ್ನು ನಿರ್ಮಿಸಲು ಕೋಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಆದರೆ ಬಸ್ ನಿಲ್ದಾಣದಲ್ಲಿ ಸಿಸಿಟಿಯನ್ನು ಅಳವಡಿಸದೆ ಭದ್ರತೆಯನ್ನು ಗಣನೆಗೆ ತೆಗೆದುಕೊಳ್ಳದಿರುವುದು ಖೇದಕರ ವಿಷಯವಾಗಿದೆ…