ದೊಡ್ಡಬಳ್ಳಾಪುರದಲ್ಲಿ ಕಿಡಿಗೇಡಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಮರ ಮತ್ತು ಫಸಲಿಗೆ ಬೆಂಕಿ
ದೊಡ್ಡಬಳ್ಳಾಪುರ-ದೊಡ್ಡಬಳ್ಳಾಪುರ ತಾಲೂಕು ಕಾಡನೂರು ಗ್ರಾಮದ ಅಬ್ದುಲ್ ಗಫರ್ ಶರೀಫ್ ಎಂಬುವವರ ಜಮೀನಿನಲ್ಲಿ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಮರದ ತುಂಡುಗಳಿಗೆ ಯಾರೋ ಕಿಡಿಗೇಡಿಗಳು ಬೇಕಂತಲೇ ಬೆಂಕಿ ಹಚ್ಚಿದ್ದಾರೆ ಇದರ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಮರದ ತುಂಡುಗಳು ಹುರಿದು ಭಸ್ಮವಾಗಿದ್ದು ಇವತ್ತು ಪಕ್ಕದಲ್ಲಿ ಇದ್ದ ಹುಣಸೆಹಣ್ಣಿನ ರಾಶಿ ಕೂಡ ಉರಿದು ಭಸ್ಮವಾಗಿದ್ದು ಅಲ್ಲದೆ ತುಂಬು ಫಸಲಿನಿಂದ ಮೈತುಂಬಿದ ಹುಣಸೆ ಮರವು ಕೂಡ ಸುಟ್ಟು ಹಾಳಾಗಿದೆ, ಅಬ್ದುಲ್ ಗಫರ್ ಶರೀಫ್ ಮಾಧ್ಯಮದೊಂದಿಗೆ ಮಾತನಾಡಿ ನಾನು ಅನೇಕ ಕಾಯಿಲೆಗಳಿಂದ ಅನಾರೋಗ್ಯ ಪಡಿತರಾಗಿದ್ದು ಎದ್ದು ಓಡಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದೇನೆ, ಇದನ್ನು ಕಂಡ ಯಾರೋ ಕಿಡಿಗೇಡಿಗಳು ಈ ರೀತಿಯ ಹಿನಾ ಕೃತ್ಯ ಮಾಡಿದ್ದಾರೆ, ಸಂಬಂಧಪಟ್ಟ ಇಲಾಖೆಗಳು ಇಂತಹ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಾಧ್ಯಮದ ಮೂಲಕ ಮನವಿ ಮಾಡುತ್ತೇನೆ ಮತ್ತು ಸಂಬಂಧಪಟ್ಟ ಇಲಾಖೆಗಳಿಂದ ನನಗೆ ಸಹಾಯ ಮಾಡುವಂತೆ ಮಾಧ್ಯಮದ ಮೂಲಕ ವಿನಂತಿಕೊಳ್ಳುತ್ತೇನೆ ಎಂದು ಎಂದು ತಮ್ಮ ಅಳಲನ್ನು ತೋಡಿಕೊಂಡರು.
ಅನಾರೋಗ್ಯ ಪೀಡಿತರಾಗಿ ಯಾವುದೇ ರೀತಿಯ ಸಹಕಾರವಿಲ್ಲದ ಅಮಾಯಕರಾದ ಇಂಥ ರೈತರಿಗೆ ಸರ್ಕಾರ ಯಾವ ರೀತಿ ಸಹಕಾರ ಮಾಡುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ ಏನೇ ಆಗಲಿ ಇಂತ ಕಿಡಿಗೇಡಿಗಳಿಗೆ ಸೂಕ್ತ ಕ್ರಮ ಕೈಗೊಳ್ಳುವುದು ಸೂಕ್ತ ಸಂಬಂಧಪಟ್ಟ ಪೊಲೀಸ್ ಇಲಾಖೆ ಕಂದಾಯ ಇಲಾಖೆ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ