ಮುಂಡಗೋಡದಲ್ಲಿ ಮೇ ೩:
ಕಾಂಗ್ರೇಸ್ ಪ್ರಜಾಧ್ವನಿ ಬೃಹತ ರ್ಯಾಲಿಗೆ ಭರ್ಜರಿ ತಯಾರಿ- ರವೀಂದ್ರ ನಾಯ್ಕ.
ಯಲ್ಲಾಪುರ: ಮುಂಬರುವ ಲೋಕಸಭಾ ಚುನಾವಣಾ ಪ್ರಚಾರಾರ್ಥ ಮುಂಡಗೋಡದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ನೇತೃತ್ವದಲ್ಲಿ ಜರಗಲಿರುವ ಪ್ರಜಾಧ್ವನಿ ಬೃಹತ ರ್ಯಾಲಿ ಯಶಸ್ಸಿಗೆ ಭರ್ಜರಿ ಪೂರ್ವ ತಯಾರಿ ಜರುಗುತ್ತಿದೆ ಎಂದು ಉತ್ತರ ಕನ್ನಡ ಜಿಲ್ಲಾ ಕಾಂಗ್ರೇಸ್ ಪ್ರಚಾರ ಸಮಿತಿ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.
ಅವರು ಇಂದು ಯಲ್ಲಾಪುರ ತಾಲೂಕಿನ ಕಾಂಗ್ರೇಸ್ ಪಕ್ಷದ ಕಾರ್ಯಾಲಯದಲ್ಲಿ ಪಕ್ಷದ ಪಧಾದಿಕಾರಿಗಳೊಂದಿಗೆ ರ್ಯಾಲಿಯ ಪೂರ್ವಭಾವಿ ಸಮಾಲೋಚನಾ ಸಭೆಯ ನಂತರ ಮೇಲಿನಂತೆ ಹೇಳಿದರು.
ಜಿಲ್ಲಾದ್ಯಂತ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ಪ್ರಚಾರ ಕಾಂiÀiðದಲ್ಲಿ ತೊಡಗಿರುವ ಹಿನ್ನಲೆಯಲ್ಲಿ ಮೇ ೩ ರಂದು ಮುಂಡಗೋಡದಲ್ಲಿ ಮತ್ತು ಕುಮಟದಲ್ಲಿ ಜರುಗಲಿರುವ ಪ್ರಜಾಧ್ವನಿ ರ್ಯಾಲಿಯಿಂದ ಮತದಾರರ ಮೇಲೆ ಕಾಂಗ್ರೇಸ್ ಪರ ಹೆಚ್ಚಿನ ಪ್ರಭಾವ ಬೀರುವುದೆಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಚುನಾವಣಾ ಪ್ರಚಾರ ಉಸ್ತುವಾರಿ ಜೆ ಎಮ್ ಶೆಟ್ಟಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಎನ್ ಕೆ ಭಟ್ಟ್, ಗ್ಯಾರಂಟಿ ಸಮಿತಿಯ ಅದ್ಯಕ್ಷ ಉಲ್ಲಾಸ ಶಾನಭಾಗ, ಜಿಲ್ಲಾ ಕಾಂಗ್ರೇಸ್ ಕಾರ್ಯದರ್ಶಿ ವಿ ಎಸ್ ಭಟ್ಟ್ ಉಪಸ್ಥಿತರಿದ್ದರು.
ಕಾಂಗ್ರೇಸ್ ಗೆಲುವು:
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಭರ್ಜರಿ ಗೆಲುವು ಸಾಧಿಸುವುದೆಂದು ಯಲ್ಲಾಪುರ ತಾಲೂಕ ಚುನಾವಣಾ ಪ್ರಚಾರದ ಉಸ್ತುವಾರಿ ಜೆ ಎಮ್ ಶೆಟ್ಟಿ ಅವರು ತಿಳಿಸಿದರು.