ಭಟ್ಕಳ: ಭಟ್ಕಳ ತಾಲೂಕಿನ ಕಡವಿನಕಟ್ಟೆ ಸಮೀಪ ನದಿಯ ನೀರಲ್ಲಿ ಮುಳುಗಿ ಇಬ್ಬರು ಮೃತಪಟ್ಟ ಘಟನೆ ಇಂದ ಸಂಜೆ ನಡೆದಿದೆ.
ನದಿಯಲ್ಲಿ ಈಜಲು ತೆರಳಿದ ವೇಳೆ ಆಕಸ್ಮಿಕವಾಗಿ ನೀರಲ್ಲಿ ಮುಳುಗುತ್ತಿದ್ದ ಯುವಕನ್ನು ರಕ್ಷಣೆ ಮಾಡಲು ತೆರಳಿದ ಮಹಿಳೆ ಕೂಡ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಭಟ್ಕಳ ದ ಸಮೀಪದ ಕಂಡೆಕೋಡ್ಲು ನಿವಾಸಿಗಳಾದ ಪಾರ್ವತಿ ಶಂಕರ ನಾಯ್ಕ(೩೫) ಹಾಗೂ ಸೂರಜ್ ಪಾಂಡು ನಾಯ್ಕ (೧೭) ಮೃತ ದುರ್ದೈವಿಗಳು.
ಕಂಡೆಕೋಡ್ಲು ಗ್ರಾಮದ ನೆರೆಹೊರೆಯವರಾದ ಐವರು ಸೇರಿಕೊಂಡು ಕಡವಿಕಟ್ಟೆ ಡ್ಯಾಂ ಸಮೀಪದ ರೈಲ್ವೆ ಸೇತುವೆ ಬಳಿ ಈಜಲು ತೆರಳಿದ್ದರು. ಹೊಳೆಯಲ್ಲಿ ಈಜುತ್ತಿರುವ ವೇಳೆ ಸೂರಜ್ ನೀರಿನಲ್ಲಿ ಮುಳುಗುತ್ತಿದ್ದುದನ್ನು ಗಮನಿಸಿದ ಪಾರ್ವತಿ ನಾಯ್ಕ ಈತನ ರಕ್ಷಣೆಗೆ ಮುಂದಾದರು. ಈ ವೇಳೆ ದುರ್ದೈವವಶಾತ್ ಮಹಿಳೆ ಕೂಡ ನೀರಿನಲ್ಲಿ ಮುಳುಗಿ ಸಾವನಪ್ಪಿದ್ದಾಳೆ.
ಇಬ್ಬರ ಮೃತ ದೇಹವನ್ನು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಸ್ಥಳಕ್ಕೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.