ಭಟ್ಕಳದಲ್ಲಿ ಪೊಲೀಸರ ಹೆಲ್ಮೆಟ್ ತಪಾಸಣೆಯ ರಿಯಾಲಿಟಿ ಚೆಕ್: ಸರ್ಕಾರದ ಖಜಾನೆಗೆ ಸೇರುವ ದಂಡದ ಹಣ ಚಿನ್ನದ ವ್ಯಾಪಾರಿ ಖಾತೆಗೆ ವರ್ಗಾವಣೆ
ಚಿನ್ನದ ಅಂಗಡಿ ಮಾಲೀಕನಿಗೂ ಪಿ.ಎಸ್.ಐ ಯಲ್ಲಪ್ಪಗೂ ಏನು ಸಂಬಂಧ?
ಭಟ್ಕಳ:ಹೆಲ್ಕೆಟ್ ರಹಿತ ದಂಡದ ಮೊತ್ತ ಪೊಲೀಸ್ ಇಲಾಖೆಯ ಖಾತೆಯ ಬದಲು ಚಿನ್ನದ ವ್ಯಾಪಾರಿಯ ಖಾತೆಗೆ ವರ್ಗಾವಣೆಯಾಗುತ್ತಿರುವ ಅಂಶ ಬೆಳಕಿಗೆ ಬಂದಿದೆ.ಭಟ್ಕಳ ವರದಿಗಾರರು ನಡೆಸಿದ ‘ ‘ರಿಯಾಲಿಟಿ ಚೆಕ್ ಕಾರ್ಯಾಚರಣೆಯಲ್ಲಿ ಇಂಥದ್ದೊಂದು ಭ್ರಷ್ಟಾಚಾರ ನಡೆಯುತ್ತಿರುವುದು ಖಾತ್ರಿಯಾಗಿದೆ.
ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಭಟ್ಕಳದ ಮೂರು ಜನ ವರದಿಗಾರರು ಹೆಲ್ಮೆಟ್ ಧರಿಸದೇ
ದ್ವಿಚಕ್ರ ವಾಹನವನ್ನು ಚಲಾಯಿಸಿಕೊಂಡು ಇಲ್ಲಿನ ನಗರ ಠಾಣೆಯ ರಸ್ತೆಯ ಎದುರಿನಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ಪೋಲೀಸ್ ಸಿಬ್ಬಂದಿಗಳು ದ್ವಿಚಕ್ರ ವಾಹನ ನಿಲ್ಲಿಸುವಂತೆ ರಿಯಾಲಿಟಿ ಚೆಕ್ ಮಾಡುತ್ತಿದ್ದ ಒಬ್ಬ ವರದಿಗಾರನ್ನು ಪಿಎಸೈ ಯಲ್ಲಪ್ಪ ಅವರ ಬಳಿ ತೆರಳುವಂತೆ ಹೇಳಿದ್ದು ನಗರ ಠಾಣೆ ಆವರಣದಲ್ಲಿ ನಿಂತಿದ್ದ ಪಿಎಸ್ಐ ಯಲ್ಲಪ್ಪ ಅವರ ಬಳಿ ಹೋದಾಗ ದಂಡ 500 ರೂ ಕಟ್ಟುವಂತೆ ಸೂಚಿಸಿದರು. ಆದರೆ ನಗದು ಹಣದ ಬದಲಿಗೆ ಆನ್ ಲೈನ್ ಸ್ಕ್ಯಾನರ್ ಮೂಲಕ ಹಣವನ್ನು ಪಾವತಿಸುವುದಾಗಿ ಅವರಲ್ಲಿ ತಿಳಿಸಿದ್ದಾರೆ.
ಮೊಬೈಲ್ ನಂಬರಿಗೆ ಹಣ ವರ್ಗಾವಣೆ :
ಅದೇ ರೀತಿ ವರದಿಗಾರರ ಮುಂದೆಯೇ ೪-೫ ಮಂದಿ ವಾಹನ ಸವಾರರಿಗೆ ಅದೇ ನಂಬರಗೆ ಹಣ ವರ್ಗಾಯಿಸಲು ಸೂಚಿಸಿದರು. ಅಲ್ಲಿದ್ದವರೆಲ್ಲ ಅದೇ ನಂಬರಿಗೆ ದಂಡದ ಹಣವನ್ನು ವರ್ಗಾಯಿಸಿದ್ದಾರೆ.
ಚಿನ್ನದ ವ್ಯಾಪಾರಿಯ ಖಾತೆ : ಹಣ ವರ್ಗಾಯಿಸುವಾಗ ಖಾತೆದಾರರ ಹೆಸರಿನಲ್ಲಿ ಭಟ್ಕಳದ ಚಿರಪರಿಚಿತ ಚಿನ್ನದ ವ್ಯಾಪಾರಿಯ ಹೆಸರಿಗೆ ಥಳಕು ಹಾಕುತ್ತಿದೆ. ಈ ಹಣ ಸರ್ಕಾರದ ಖಾತೆಗೆ ಹೋಗುತ್ತದೆಯೋ ಅಥವಾ ಯಾರ ಜೇಬಿಗೆ ಸೇರುತ್ತದೆಯೋ ಎಂಬ ಪ್ರಶ್ನೆ ಎದ್ದಿದೆ.
ಈ ರೀತಿ ದಂಡದ ಹಣವು ದುರ್ಬಳಕೆಯಾಗುತ್ತಿರುವ ಬಗ್ಗೆ ಪೊಲೀಸ್ ಇಲಾಖೆಯ ಮೇಲಾಧಿಕಾರಿಗಳು ಗಮನ ಹರಿಸಬೇಕಿದೆ.
ಈ ಬಗ್ಗೆ ಸ್ವತಃ ಯಲ್ಲಪ್ಪ ಅವರ ಗಮನಕ್ಕೆ ತಂದಾಗ, ಹಾರಿಕೆಯ ಉತ್ತರ ನೀಡಿ ಸಮಜಾಯಿಷಿ ನೀಡಲು ಮುಂದಾದರು. ಮಾಧ್ಯಮದವರೆಂದು ಮೊದಲೇ ಹೇಳಿದ್ದರೆ ನಿಮ್ಮನ್ನು ಬಿಡುತ್ತಿದ್ದೇವು ಎಂದು ಹೇಳಿದ್ದು ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ.
ಚಿನ್ನದ ಅಂಗಡಿಯ ಮಾಲೀಕನಿಗೆ ಹಣ ವರ್ಗಾವಣೆ ಮಾಡಲು ಯಾಕೆ ಪಿ.ಎಸ್.ಐ ಯಲ್ಲಪ್ಪ ಯಾಕೆ ಹೇಳಿದರು? ಚಿನ್ನದ ಅಂಗಡಿ ಮಾಲೀಕನಿಗೂ ಪಿ.ಎಸ್.ಐ ಯಲ್ಲಪ್ಪಗೂ ಏನು ಸಂಬಂಧ? ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಗಮನ ಹರಿಸಿ ತನಿಖೆ ಮಾಡಲೇಬೇಕಾಗಿದೆ.
ರಸೀದಿಯಲ್ಲಿ ನಗದು ಪಾವತಿ !: ಪೋಲಿಸರು ಹೆಲ್ಕೆಟ್ ಧರಿಸದೇ ಇದ್ದ ಹಿನ್ನೆಲೆ ದಂಡ ಹಾಕಿದ ರಸೀದಿಯಲ್ಲಿ ನಗದು ಎಂದು ನಮೂದಿಸಿದ್ದಾರೆ. ಆದ್ರೆ ಭಟ್ಕಳ ವರಗಾರರಿಂದ ದಂಡದ ಹಣವನ್ನು ಸ್ವೀಕರಿಸಿದ್ದು ಆನ್ ಲೈನ್ ಮೂಲಕ. ಇದರಲ್ಲೇನೋ ಮೋಸದಾಟವಿದೆಯೇ? ತನಿಖೆಯಿಂದಲೇ ತಿಳಿದುಬಾರಬೇಕಿದೆ.