ಕಾರ್ಕಳ-ಬೈಕ್ ಗೆ ಮಿನಿಲಾರಿ ಡಿಕ್ಕಿಹೊಡೆದ ಪರಿಣಾಮ ಬೈಕ್ ನಲ್ಲಿದ್ದ ನಾಲ್ವರು ಮೃತಪಟ್ಟ ಘಟನೆ ಉಡುಪಿಯ ಕಾರ್ಕಳ ತಾಲೂಕಿನ ಧರ್ಮಸ್ಥಳ ಹೆದ್ದಾರಿಯ ಪಾಜೆಗುಡ್ಡೆ ಬಳಿ ನಡೆದಿದೆ.
ನಾಲ್ವರು ಮೃತರು ಒಂದೇ ಕುಟುಂಬವಾದವರಾಗಿದ್ದು ಇವರನ್ನು ಸುರೇಶ್ ಆಚಾರ್ಯ (36), ಸಮೀಕ್ಷಾ (7), ಸುಶ್ಮೀತಾ (5) ಮತ್ತು ಸುಶಾಂತ್ (2) ಎಂದು ಗುರುತಿಸಲಾಗಿದೆ.ಇನ್ನೂ ಪತ್ನಿ ಮಿನಾಕ್ಷಿ ಆಚಾರ್ಯ (32) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಕಾರ್ಕಳದಿಂದ ವೇಣೂರು ತೆರಳುತ್ತಿದ್ದಾಗ ಲಾರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಕಾರ್ಕಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.