ಹಾಸನ: ಜಮೀನು ವಿವಾದಕ್ಕೆ ಯುವಕನೋರ್ವನ ಕೊಲೆ ಮಾಡಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ತಿರುಮನಹಳ್ಳಿಯಲ್ಲಿ ನಡೆದಿದೆ.
ಯಶ್ವಂತ್ ಮೃತ ಯುವಕ.ಯಶ್ವಂತ್ ಮತ್ತು ಆತನ ಸಹೋದರ ಯೋಧ ಯತೀಶ್ ಮೇಲೆ ಜಾಗದ ವಿಚಾರಕ್ಕೆ ಸಂಬಂಧಿಸಿ ಚಂದನ್ ಮತ್ತು ಆತನ ಕುಟುಂಬದವರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.ಘಟನೆಯಲ್ಲಿ ಗಂಭೀರವಾಗಿದ್ದ ಯಶ್ವಂತ್ ಅಧಿಕ ರಕ್ತಸ್ರಾವದಿಂದ ಆಸ್ಪತ್ರೆಯಲ್ಲಿ ಸಾವನಪ್ಪಿದ್ದಾನೆ.
ಮೃತ ಯಶ್ವಂತ್ ಸಹೋದರ ಯೋಧ ಯತೀಶ್ಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಯಶ್ವಂತ್ ಅವರ ಬಳಿ ನಮ್ಮ ಜಾಗ ಇತ್ತು ಎಂದು ಚಂದನ್ ಕುಟುಂಬ ಗಲಾಟೆ ನಡೆಸಿದ್ದಾರೆ.ಬಳಿಕ ಯಶ್ವಂತ್ ಗೆ ಆರೋಪಿ ಚಂದನ್ ಕುಡುಗೋಲಿನಿಂದು ಕೊಲೆ ಮಾಡಿದ್ದಾರೆ.
ಚಂದನ್ ಮತ್ತು ಆತನ ಸಹೋದರ ಅಶ್ವಥ್ ಸೇರಿ ಐವರ ವಿರುದ್ದ ದೂರು ದಾಖಲಾಗಿದೆ.