ಮುರುಘಾಶ್ರೀ ವಿರುದ್ಧ ಪೋಕ್ಸೋ ಪ್ರಕರಣ -ದಯಾ ಮರಣ ನೀಡುವಂತೆ ಕೋರಿ ರಾಷ್ಟ್ರಪತಿಗೆ ಪತ್ರ ಬರೆದ ಸಂತ್ರಸ್ತ ಬಾಲಕಿಯ ತಾಯಿ*
*ಚಿತ್ರದುರ್ಗ : ಮುರುಘಾಶ್ರೀ ವಿರುದ್ಧ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂದ ಸಂತ್ರಸ್ತ ಬಾಲಕಿಯರ ತಾಯಿ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಮತ್ತೊಂದು ಪತ್ರ ಬರೆದಿದ್ದಾರೆ.*
*ಇನ್ನು ಈ ಹಿಂದೆಯೂ ಸಂತ್ರಸ್ತೆಯ ತಾಯಿ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ಮುರಘಾ ಶ್ರೀ ವಿರುದ್ದ ನೇರವಾಗಿ ಪ್ರಧಾನಿ, ರಾಷ್ಟ್ರಪತಿಗೆ ಪತ್ರ ಬರೆದು ತಮಗೆ ನ್ಯಾಯ ದೊರಕಿಸಿ ಕೊಡುವಲ್ಲಿ ನೆರವಾಗುವಂತೆ ಕೋರಿದ್ದರು. ತಮಗೆ ನ್ಯಾಯ ಕೊಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಂತ್ರಸ್ತ ಬಾಲಕಿಯರ ತಾಯಿ ಪತ್ರ ಬರೆದಿದ್ದರು.*