ಬಂಟ್ವಾಳ:ಈಜಲು ತೆರಳಿದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತುಂಬೆ ಡ್ಯಾಂ ನಲ್ಲಿ ನಡೆದಿದೆ.
ಪರ್ಲಿಯಾ ನಿವಾಸಿ ಝುನೈದ್ ಎಂಬವರ ಪುತ್ರ ಸಲ್ಮಾನ್ ಫಾರಿಸ್ (16) ಮೃತ ಬಾಲಕ.ಈತ SSLC ವಿದ್ಯಾರ್ಥಿಯಾಗಿದ್ದ.
ಫಾರಿಸ್ ಶುಕ್ರವಾರವಾದ ಕಾರಣ ನಮಾಝ್ ಬಳಿಕ ಮೂವರು ಸ್ನೇಹಿತರ ಜೊತೆ ಬಂಟರ ಭವನದ ಹಿಂಭಾಗದಲ್ಲಿರುವ ವೆಂಟೆಡ್ ಡ್ಯಾಮ್ ನಲ್ಲಿ ಈಜಾಡಲು ತೆರಳಿದ್ದಾರೆ.ಈ ವೇಳೆ ನೀರಿಗಿಳಿದ ಸಲ್ಮಾನ್ ನೀರಿನಲ್ಲಿ ಮುಳುಗಿದ್ದಾನೆ.ಜೊತೆಗಿದ್ದವರು ಇತರರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಬಂಟ್ವಾಳ ಗ್ರಾಮಾಂತರ ಠಾಣೆಯ
ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.