ಕಾಳಿ ನದಿಗೆ ಹಾರಿ ಜಿಲ್ಲಾ ಪಂಚಾಯತ್ ನೌಕರ ಉದ್ಯೋಗಿ ಆತ್ಮಹತ್ಯೆಗೆ ಶರಣು
ಕಾರವಾರ: ಕಾಳಿ ನದಿಗೆ ಹಾರಿ ಜಿಲ್ಲಾ ಪಂಚಾಯತ್ ನೌಕರ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕಾರವಾರದಲ್ಲಿ ನಡೆದಿದೆ.
ಯೋಜನಾಧಿಕಾರಿ ಶ್ರೀಕಾಂತ ಮೇಲಿನಮನೆ (38) ಮೃತ ದುರ್ದೈವಿ. ಕೆಲಸದ ಒತ್ತಡ ಮತ್ತು ಮೇಲಾಧಿಕಾರಿಗಳ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಶ್ರೀಕಾಂತ ತಂದೆ ತಮ್ಮಣ್ಣ ಕಾರವಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.