ಹಾಡುಹಗಲೇ ಕತ್ತಿಯಿಂದ ಕಡಿದು ಒಂದೇ ಬ್ರಾಹ್ಮಣ ಕುಟುಂಬದ ನಾಲ್ವರ ಮರ್ಡರ್
ಭಟ್ಕಳ- ಕತ್ತಿಯಿಂದ ಕಡಿದು ಒಂದೇ ಕುಟುಂಬದ ನಾಲ್ವರನ್ನು ಹತ್ಯೆಗೈದಿರುವ ಘಟನೆ ತಾಲೂಕಿನ ಹಾಡುವಳ್ಳಿ ಗ್ರಾಮದ ಸಮೀಪ ನಡೆದಿದೆ. ಶಂಭು ಭಟ್(65), ಅವರ ಪತ್ನಿ ಮಾದೇವಿ ಭಟ್(40), ಮಗ ರಾಜೀವ್ ಭಟ್(34) ಹಾಗೂ ಸೊಸೆ ಕುಸುಮಾ ಭಟ್(30) ಕೊಲೆಯಾದ ದುರ್ದೈವಿಗಳು. ಆಸ್ತಿ ವಿಚಾರಕ್ಕೆ ಸಂಬಂಧಿಯಿಂದಲೆ ಹತ್ಯೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೊಲೆಯಾದ ದೇಹಗಳು ಛಿದ್ರ ಛಿದ್ರವಾಗಿದೆ ನೋಡುವುದರಲ್ಲಿ ಭಯ ಹುಟ್ಟಿಸುವಂತಿದೆ., ಸ್ಥಳಕ್ಕೆ ಭಟ್ಕಳ ಗ್ರಾಮೀಣ ಠಾಣೆ ಪೊಲೀಸ್ರು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಕೊಲೆಗಡುಕರಿಗೆ ಬಲೆ ಬಿಸಿದ್ದಾರೆ. ಇನ್ನು ಹೆಚ್ಚಿನ ಮಾಹಿತಿ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಾಗಿದೆ.