ಕರ್ನಾಟಕ ರಣಧೀರರ ವೇಧಿಕೆ (ರಿ) ಬೆಂಗಳೂರು ಸಂಘಟನೆಯ ಕರಾವಳಿ ಕರ್ನಾಟಕದ ಅಧ್ಯಕ್ಷರಾಗಿ ಕುಮಾರ ನಾಯ್ಕ ಭಟ್ಕಳ ಆಯ್ಕೆ
ಕಾರವಾರ- ಕರ್ನಾಟಕ ರಣಧೀರರ ವೇಧಿಕೆ (ರಿ) ಬೆಂಗಳೂರು ಸಂಘಟನೆಯ ಕರಾವಳಿ ಕರ್ನಾಟಕ( ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ) ಅಧ್ಯಕ್ಷರಾಗಿ
ಪತ್ರಕರ್ತ , ಮಾಹಿತಿ ಹಕ್ಕು ಕಾರ್ಯಕರ್ತ , ಸಾಮಾಜಿಕ ಹೋರಾಟಗಾರ ಕುಮಾರ ನಾಯ್ಕ ಭಟ್ಕಳ ಅವರನ್ನು ಆಯ್ಕೆ ಮಾಡಿ ಸಂಘಟನೆಯ ರಾಜ್ಯ ಅಧ್ಯಕ್ಷ ಶಂಕರೆ ಗೌಡ್ರು ಕೆ ಆರ್ ಆದೇಶ ಹೊರಡಿಸಿದ್ದಾರೆ. ಅವರು ತಮ್ಮ ಬೆಂಗಳೂರಿನ ನೆಲಮಂಗಲದಲ್ಲಿರುವ ಸಂಘಟನೆಯ ಕೇಂದ್ರ ಕಛೇರಿಯಲ್ಲಿ ಆಗಸ್ಟ್ 5 ರಂದು ಕುಮಾರ ನಾಯ್ಕ ಭಟ್ಕಳ ಅವರನ್ನು ಕರಾವಳಿ ಕರ್ನಾಟಕ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಸನ್ಮಾನಿಸಿ , ಆದೇಶ ಪತ್ರ ನೀಡಿದರು. ಕುಮಾರ ನಾಯ್ಕ ಅವರು ಕಳೆದ 15 ವರುಷಗಳಿಂದ ಕರಾವಳಿ ಜಿಲ್ಲೆಗಳಲ್ಲಿ ಸಾಮಾಜಿಕ ಹೊರಟಗಾರರಾಗಿ , ಮಾಹಿತಿ ಹಕ್ಕು ಕಾರ್ಯಕರ್ತರಾಗಿ ಹೋರಾಟ ಮಾಡುತ್ತ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನ ಮಾಡುತ್ತಿದ್ದಾರೆ.
ನಾಡು ,ನುಡಿ ,ನೆಲ, ಜಲ , ಭಾಷೆ ಗಳಿಗೆ ದಕ್ಕೆ ಬಂದಾಗ ಸದಾ ಹೋರಾಟಕ್ಕೆ ಸಿದ್ಧವಾಗಿ ತಮ್ಮನ್ನು ಹೋರಾಟದಲ್ಲಿ ತೊಡಗಿಸಿಕೊಳ್ಳುವಂತೆ ತಿಳಿಸಿದ್ದಾರೆ. ಭ್ರಷ್ಟಾಚಾರ , ಅನ್ಯಾಯ ವಿರುದ್ಧ ಹೋರಾಟ ಮಾಡುವಂತೆ ತಿಳಿಸಿದ್ದಾರೆ. ಕರಾವಳಿ ಕರ್ನಾಟಕದ ಬಡವರ ಪರ ದ್ವನಿಯಾಗಿ ಕಾರ್ಯ ನಿರ್ವಹಿಸುವಂತೆ ಸಲಹೆ ನೀಡಿದ್ದಾರೆ ಮತ್ತು ಕರಾವಳಿ ಕರ್ನಾಟಕದ ಜಿಲ್ಲೆಗಳಾದ ಉಡುಪಿ , ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಘಟನೆಯನ್ನು ಬಲಪಡಿಸುವಂತೆ ತಿಳಿಸಿದ್ದಾರೆ.