ಭಟ್ಕಳ ಗ್ರಾಮೀಣ ಪೊಲೀಸ ಠಾಣೆಯ ಪೊಲೀಸ ಇನ್ಸ್ಪೆಕ್ಟರ್ ಗೋಪಿಚಂದನ ನೇತೃತ್ವದಲ್ಲಿ
ಆರೋಪಿಗಳ ಸಹಿತ ಸರ್ಕಾರದ ಅನ್ನಭಾಗ್ಯ ಯೋಜನೆಯ 6000 ಕೆ.ಜಿ ಅಕ್ರಮ ಅಕ್ಕಿ ವಶ
ಭಟ್ಕಳ-ಭಟ್ಕಳ ತಾಲೂಕಿನ ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಜಾಗಟೆಬೈಲ್ ಮೆಂಗೋ ಫಾರ್ಮ್ ಎದುರುಗಡೆ ಇರುವ ಗೋಡೊನ ನಲ್ಲಿ ಸಂಗ್ರಹಿಸಿರುವ ಸರ್ಕಾರದ ಅನ್ನ ಭಾಗ್ಯ ಯೋಜನೆಯ 6000 ಕೆ.ಜಿ ಅಕ್ರಮ ಅಕ್ಕಿಯನ್ನು ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ.ಭಟ್ಕಳ ಡಿ.ಎಸ್.ಪಿ ಕೆ ಶ್ರೀಕಾಂತ್ ಮಾರ್ಗದರ್ಶನದಲ್ಲಿ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಗೋಪಿಚಂದನ ಅವರು ತಮ್ಮ ಸಿಬ್ಬಂದಿಗಳೊಂದಿಗೆ ಗುರುವಾರ ಮಧ್ಯಾಹ್ನ ದಾಳಿ ನಡೆಸಿ 6000 ಕೆ.ಜಿ ಅಕ್ರಮ ಅಕ್ಕಿ ವಶಪಡಿಸಿಕೊಂಡು , ಆರೋಪಿಗಳಾದ ಗುಲ್ಷನ್ ಶಾಬ್, ರೆಹಮಾನ್ ಮತ್ತು ಇಮ್ತಿಯಾಜ್ ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಗೋಡೊನಲ್ಲಿ ಸಂಗ್ರಹಿಸಿದ 6000 ಕೆ.ಜಿ ಅನ್ನಭಾಗ್ಯದ ಅಕ್ರಮ ಅಕ್ಕಿ ಕುಂದಾಪುರದ ನಿಶಾನ ಎನ್ನುವವರಿಗೆ ಸೇರಿದ ಎಂದು ತಿಳಿದುಬಂದಿದೆ.ಇದರಲ್ಲಿ 50ಕೆ.ಜಿ ಯ ಒಟ್ಟು 125 ಚೀಲಗಳಿವೆ. ನಂತರ ಆಹಾರ ನಿರೀಕ್ಷರಾದ ಪಾಂಡು ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಪೊಲೀಸರೊಂದಿಗೆ ಪಂಚನಾಮೇ ನಡೆಸಿ ವಶಪಡಿಸಿಕೊಂಡ 6000 ಕೆ.ಜಿ ಅಕ್ಕಿಯನ್ನು ಸರಕಾರಿ ಆಹಾರ ಗೋಡೊನ ಗೆ ಸಾಗಿಸುವ ಕ್ರಮ ಕೈ ಕೊಂಡಿದ್ದಾರೆ.ಭಟ್ಕಳ ಗ್ರಾಮೀಣ ಪೋಲಿಸರು ಇನ್ನು ಆರೋಪಿಗಳಿನಿಂದ ಇನ್ನು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಪಂಚರಾದ ರಾಮ ನಾಯ್ಕ ಮತ್ತು ಶಫೀ ಹಾಜರಿದ್ದರು.