ಭಟ್ಕಳ ತಾಲೂಕಾ ಕಸಾಪದಿಂದ ದೇಶಭಕ್ತಿಗೀತೆ ಸ್ಪರ್ಧೆ -ಬಹುಮಾನ ವಿತರಣೆ.
ಭಟ್ಕಳ ತಾಲೂಕಾ ಕಸಾಪದಿಂದ ೭೭ನೇಯ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಇಲ್ಲಿನ ಮುರ್ಡೇಶ್ವರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆರೆಕಟ್ಟೆ ಯಲ್ಲಿ ದೇಶ ಭಕ್ತಿ ಗೀತೆ ಸಮೂಹ ಗಾಯನ ಸ್ಪರ್ಧೆ ನಡೆಸಲಾಯಿತು.
ಸ್ಪರ್ಧೆಯಲ್ಲಿ ಪ್ರಕೃತಿ ಮೊಗೇರ, ಮೌಲ್ಯ ನಾಯ್ಕ, ಶ್ರೀನಿಧಿ ಹರಿಕಾಂತ,ಲಿಖಿತ ಹರಿಕಾಂತ,ಆಸ್ರಿತ ಹರಿಕಾಂತ, ಸಿಂಚನ
ಹರಿಕಾಂತ ಪ್ರಥಮ ಬಹುಮಾನ, ಶೃತಿಕಾ ದೇವಾಡಿಗ, ನವ್ಯ ದೇವಾಡಿಗ, ತನಿಷಾ ಹರಿಕಾಂತ, ಗೌತಮಿ ನಾಯ್ಕ, ಸಿಂಚನಾ ನಾಯ್ಕ, ಸಿಂಚನಾಮುರ್ಡೇಶ್ವರ ಹರಿಕಾಂತ ದ್ವಿತೀಯ ಬಹುಮಾನ, ಮನ್ವಿತ ದೇವಾಡಿಗ,ಆದಿ ಹರಿಕಾಂತ, ಅನಿಶ ನಾಯ್ಕ, ಚಿರಾಗ ನಾಯ್ಕ, ಗೌತಮ ನಾಯ್ಕ, ಮನ್ವಿತ ಹರಿಕಾಂತ ತೃತೀಯ ಬಹುಮಾಮ ಪಡೆದರೆ, ಪೂರ್ಣ ನಾಯ್ಜ, ರಂಜಿತಾ ನಾಯ್ಕ, ಶ್ರಾವಣಿ ನಾಯ್ಕ, ಸಾನ್ವಿ ಹರಿಕಾಂತ, ಅಂಕಿತಾ ನಾಯ್ಕ ಪಾವನಿ ಗಾಯತೊಂಡೆ ಪ್ರೋತ್ಸಾಹಕ ಬಹುಮಾನವನ್ನು ಪಡೆದುಕೊಂಡರು. ವಿಜೇತರಾದವರಿಗೆ ಸಾಹಿತಿ ಮಾನಾಸುತ ಶಂಭು ಹೆಗಡೆ, ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಪಿ.ಬಂಢಾರಿ, ಮುಖ್ಯಾಧ್ಯಾಪಕಿ ಸುರೇಖಾ ಬಂಢಾರಿ ಬಹುಮಾನ ವಿತರಿಸಿದರು. ಪರಿಷತ್ ವತಿಯಿಂದ ಎಲ್ಲಾ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ರಾಘವೇಂದ್ರ ಗಾಯತೊಂಡೆ, ಶಾಲಾ ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಹಾಗೂ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಅಭಿನಂದಿಸಿದ್ದಾರೆ.