ನಕಲಿ ಅಲೋಪತಿ ಡಾಕ್ಟರ್ ಪರ್ಜಿತ್ ನಂಬಿಯಾರ್ ಕ್ಲಿನಿಕ್ ಮೇಲೆ ದಾಳಿ ನಡೆಸಿದ ಕುಂದಾಪುರ THO ಡಾಕ್ಟರ್ ಪ್ರೇಮಾನಂದ*
*ಕುಂದಾಪುರ-ನಕಲಿ ಅಲೋಪತಿ ಡಾಕ್ಟರ್ ಪರ್ಜಿತ್ ನಂಬಿಯಾರ್ ಕ್ಲಿನಿಕ್ ಮೇಲೆ ಹಠಾತ್ ದಾಳಿ ನಡೆಸಿದ ಕುಂದಾಪುರ ತಾಲೂಕು ಆರೋಗ್ಯಧಿಕಾರಿ ಡಾಕ್ಟರ್ ಪ್ರೇಮಾನಂದ್ ಮತ್ತು ತಂಡ. ಇವರು ಆಯುರ್ವೇದಿಕ್ ಡಾಕ್ಟರ್ ಆಗಿದ್ದು ಇವರು ಮೊದಲಿನಿಂದಲೂ ಅಲೋಪತಿ ಪ್ರಾಕ್ಟೀಸ್ ಮಾಡುತ್ತಿದ್ದರು ಎನ್ನುವ ಸಾರ್ವಜನಿಕರ ದೂರಿನ ಮೇಲೆ ದಾಳಿಯ ನಡೆಸಿದಾಗ ಇವರ ಕ್ರಾಸ್ ಪ್ರಾಕ್ಟೀಸ್ ಸಾಬೀತಾಗಿದೆ ಇವರ ಮೇಲೆ FIR ದಾಖಲಿಸಲಾಗಿದೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಈತ ಆಯುರ್ವೇದ ಡಾಕ್ಟರ್ ಜಯಮೋಹನ್ ಬಸ್ರೂರು ಅವರ ಅಳಿಯ ಎನ್ನಲಾಗಿದೆ.*
ಕಳೆದ ಒಂದು ವರ್ಷದ ಹಿಂದೆಯೂ ಸ್ಟಿಂಗ್ ಪತ್ರಕರ್ತ ಕಿರಣ್ ಪೂಜಾರಿಯವರು ಈತನ ಕ್ರಾಸ್ ಪ್ರಾಕ್ಟೀಸ್ ಅನ್ನು ಸಾಬೀತುಪಡಿಸಿ ದಾಖಲೆ ನೀಡಿದರು ಸಹ ಅಂದಿನ THO ಡಾ. ರಾಜೇಶ್ವರಿ ಮತ್ತು DHO ನಾಗಭೂಷಣ್ ಉಡುಪ ಹಾಗೂ ರಾಜಕೀಯದವರ ಶ್ರೀರಕ್ಷೆಯಿಂದ ಈತನ ಕೃತ್ಯವನ್ನು ಮುಚ್ಚಿ ಹಾಕಲಾಗಿತ್ತು. ತದನಂತರ ಸಹ ಈತ ರಾಜ ರೋಷವಾಗಿ ಹಲೋಪತಿ ಮೆಡಿಸಿನ್ ಅನ್ನು ನೀಡುತ್ತಿದ್ದಿದ್ದ ಕಾರಣ ಸಾರ್ವಜನಿಕರು ಈಗಿನ THO ಡಾಕ್ಟರ್ ಪ್ರೇಮಾನಂದ ರವರ ಗಮನಕ್ಕೆ ತಂದಿದ್ದರು.
ಕುಂದಾಪುರ ಮತ್ತು ಬೈಂದೂರಿಗೆ ಒಬ್ಬ ದಕ್ಷ ಅಧಿಕಾರಿಯ ಅಗತ್ಯ ಇತ್ತು. ಮುಂದಿನ ದಿನಗಳಲ್ಲಿ ನಕಲಿ ಅಲೋಪತಿ ಡಾಕ್ಟರ್ ಗಳ ಹಾವಳಿಯನ್ನು ತಪ್ಪಿಸುವ ಸೂಚನೆ ದೊರೆತಿದೆ. ಸಾರ್ವಜನಿಕ ವಲಯದಲ್ಲಿ ಡಾಕ್ಟರ್ ಪ್ರೇಮಾನಂದ ಬಗ್ಗೆ ಪ್ರಶಂಸೆ ವ್ಯಕ್ತವಾಗಿದೆ.