ನಾಲ್ಕು ದಶಕದ ಮೀಸಲಾತಿ ಹೋರಾಟದ ಮೆಲುಕ
ಮೀಸಲಾತಿ ಸೌಲಭ್ಯದ ಸಮಾಜಕ್ಕೆ ಸಾಮಾಜಿಕ ನ್ಯಾಯ- ರವೀಂದ್ರ ನಾಯ್ಕ.
ಶಿರಸಿ: ಅನಕ್ಷರಸ್ಥ, ಆರ್ಥೀಕವಾಗಿ ದುರ್ಬಲ, ಸಾಮಾಜಿಕ ಅಸಮತೋಲನಕ್ಕೆ ಒಳಗೊಂಡು, ಮೀಸಲಾತಿ ವಂಚಿತ ಜಾತಿಯ ಸದಸ್ಯರಲ್ಲಿ ಸಾಮಾಜಿಕ ಪ್ರಜ್ಞೆ ಮತ್ತು ಜಾಗೃತೆ ಮೂಡಿಸುವ ಮೂಲಕ ಮೀಸಲಾತಿ ಹಕ್ಕಿಗೆ ಕಳೆದ ನಾಲ್ಕು ದಶಕಗಳಲ್ಲಿ ಮೀಸಲಾತಿ ವಂಚಿತಗೊAಡಿರುವ ಸಾಮಾಜಿಕ ನ್ಯಾಯ ಕೊಡಿಸಲಾಗಿದೆ ಎಂದು ಸಾಮಾಜಿಕ ಹೋರಾಟಗಾರ, ಹಿರಿಯ ವಕೀಲ ರವೀಂದ್ರ ನಾಯ್ಕ ಅವರು ಹೇಳಿದರು.
ಅವರು ನಾಲ್ಕು ದಶಕಗಳ ಸಾಮಾಜಿಕ ಹೋರಾಟದಲ್ಲಿನ ಶೈಕ್ಷಣಿಕ, ಆರ್ಥೀಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಸೌಲಭ್ಯ ವಂಚಿತ ಸಮಾಜವನ್ನ ಗುರುತಿಸಿ ಮೀಸಲಾತಿ ನೀಡಿದ ಹೋರಾಟದ ಹಿನ್ನೆಲೆಯನ್ನ ದಾಖಲೆಯ ಮೂಲಕ ಪ್ರಸ್ತುತ ಪಡಿಸುತ್ತಾ ಮೇಲಿನಂತೆ ಹೇಳಿದರು.
ಚೆನ್ನಪ್ಪ ರೆಡ್ಡಿ ಮೀಸಲಾತಿ ಆಯೋಗದಲ್ಲಿ, ಗುನಗಿ ಪಡ್ತಿ, ಉಪನಾಡವರ, ಕುಳವಡಿ ಮರಾಠಿ ಮುಂತಾದ ಜಾತಿಗಳು ಮೀಸಲಾತಿ ಪಟ್ಟಿಯಿಂದ ಕೈಬಿಟ್ಟಿರುವುದನ್ನ ಅಂದಿನ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಗಮನಕ್ಕೆ ತಂದು ನ್ಯಾಯ ಒದಗಿಸಿ ಕೊಡಲಾಗಿದ್ದು ೯೦ ರ ದಶಕದಲ್ಲಿ ರಾಷ್ಟಿçÃಯ ಹಿಂದುಳಿದ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಪಿ.ಕೆ ಶ್ಯಾಮಸುಂದರ ನೇತ್ರತ್ವದ ಆಯೋಗಕ್ಕೆ ಕೇಂದ್ರ ಸರಕಾರದ ಮೀಸಲಾತಿಯಿಂದ ವಂಚಿತರಾಗಿರುವ ಶೇರುಗಾರ್, ಸಿದ್ಧಿ, ಗುನಗಿ ಮತ್ತು ಕುಳವಾಡಿ ಮರಾಠಿ ಸಮಾಜವನ್ನ ತಾಂತ್ರಿಕ ದೋಷದಿಂದ ಮೀಸಲಾತಿ ವಂಚಿತವಾಗಿರುವ ಸಮಾಜದ ಪರವಾಗಿ ಕಾರ್ಯ ನಿರ್ವಹಿಸಲಾಗಿದೆ ಎಂದು ಅವರು ತಿಳಿಸಿದರು.
ಶಾಶ್ವತ ರಾಜ್ಯ ಹಿಂದುಳಿದ ಆಯೋಗದ ಪ್ರಥಮ ಅಧ್ಯಕ್ಷ ಪ್ರೋ. ರವಿವರ್ಮ ಕುಮಾರ್ ಆಯೋಗದ ಮುಂದೆ ಕುಂಬ್ರಿ ಮರಾಠಿ, ಪಾಗಿ (ಮಿನುಗಾರರ ಉಪಜಾತಿ) ಹಾಗೂ ತಾಂತ್ರಿಕ ದೋಷದ ಸಮಸ್ಯೆಯಿಂದ ಮೀಸಲಾತಿ ವಂಚಿತರಾಗಿರುವ ಕುಳವಾಡಿ ಮತ್ತು ಗುನಗಿ ಸಮಾಜಕ್ಕೆ ಮೀಸಲಾತಿ ಕುರಿತು ವಾದಮಂಡಿಸಿ ಮೀಸಲಾತಿ ಪಟ್ಟಿಗೆ ಸೇರಿಸಲ್ಪಟ್ಟಿರುವುದು ದಾಖಲಾರ್ಹ ಕ್ರಮ ಎಂದು ಅವರು ಉಲ್ಲೇಖಿಸಿದರು.
ಹಿಂದಿನ ಪ್ರಧಾನ ಮಂತ್ರಿ ವಿ.ಪಿ ಸಿಂಗ್ ಜೊತೆ ಹಿಂದುಳಿದ ಸಮಾಜಗಳ ಮೀಸಲಾತಿ ಕುರಿತು ಮಂಡಲ ವರದಿ ಜ್ಯಾರಿಯಲ್ಲಿ ಪಾಲ್ಗೊಂಡಿರುವುದು ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಹಾಲಕ್ಕಿ, ಗೌಳಿ, ಕುಣಬಿ, ಸಿದ್ಧಿ, ಕುಂಬ್ರಿ ಮರಾಠಿ, ಹಿರಿಯ ಕುಳವಾಡಿ ಮರಾಠಿ ಸಮಾಜವನ್ನ ಪರಿಶಿಷ್ಟ ವರ್ಗಕ್ಕೆೆ್ಕ ಸೇರಿಸಲು ಆಗ್ರಹಿಸಿ ೧೯೯೩ ರಲ್ಲಿ ಕಾರವಾರದಲ್ಲಿ ಬೃಹತ್ ಪ್ರತಿಭಟನೆ ಮೂಲಕ ಸರಕಾರದ ಗಮನ ಸೆಳೆಯಿಲಾಗಿತ್ತು ಆದರೇ, ಇಂದಿಗೂ ಸಿದ್ಧಿ ಸಮಾಜವನ್ನ ಬಿಟ್ಟು ಇನ್ನಾವ ಸಮಾಜವು ಪರಿಶಿಷ್ಟ ವರ್ಗಕ್ಕೆ ಸೇರದಿರುವುದು ವಿಷಾದಕರ ಎಂದು ಅವರು ವಿಷಾದಿಸಿದ್ದಾರೆ.
ವಿಶೇಷ ಕಾರ್ಯ:
ಮೀಸಲಾತಿ ವಂಚಿತ ಸಮಾಜದ ಅಧ್ಯಯನ, ಜಾತಿಯ ಮೂಲ, ಸಂಶೋಧನೆ ಸಂಪ್ರದಾಯ ಮತ್ತು ಸ್ಥಿತಿ-ಗತಿಯಗಳ ಕುರಿತು ಸರ್ವೇ ಮಾಡಿಸಿ, ಮೀಸಲಾತಿ ಸೌಲಭ್ಯ ವಂಚಿತ ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಟ್ಟಿರುವುದು, ನಾಲ್ಕು ದಶಕದ ಸಾಮಾಜಿಕ ಹೋರಾಟದ ವಿಶೇಷ ಕಾರ್ಯವಾಗಿದೆ ಎಂದು ರವೀಂದ್ರ ನಾಯ್ಕ ಹೇಳಿದರು.