*ಮತ್ತೊಮ್ಮೆ ಮೋದಿ 2024 * ಗೋಡೆ ಬರಹ ಕಾರ್ಯಕ್ರಮ ಕ್ಕೆ ಭಟ್ಕಳದಲ್ಲಿ ಇಂದು ಚಾಲನೆ ನೀಡಿದ ವಿಧಾನ ಪರಿಷತ್ತಿನ ವಿರೋಧ ಪಕ್ಷ ನಾಯಕರಾದ ಕೋಟ ಶ್ರೀನಿವಾಸ ಪೂಜಾರಿ
ಭಟ್ಕಳ-ಇಂದು ಭಟ್ಕಳ ಮಂಡಲದ ಹೊನ್ನಿಗದ್ದೆ ಬೂತ್ ನಲ್ಲಿ *ವಿಧಾನ ಪರಿಷತ್ ವಿರೋದ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ಕೋಟ ಶ್ರೀನಿವಾಸ ಪೂಜಾರಿ* ಯವರು *”ಮತ್ತೊಮ್ಮೆ ಮೋದಿ 2024″ : ಗೋಡೆ ಬರಹ* ಕ್ಕೆ ಚಾಲನೆ ನೀಡಿದರು. ಅವರು ಭಟ್ಕಳ್ದ ಹೊನ್ನೆಗದ್ದೆ ಬೂತ್ ನಲ್ಲಿ ಗೋಡೆಯ ಮೇಲೆ ಮತ್ತೊಮ್ಮೆ ಮೋದಿ 2024 ಎಂದು ಬರಹ ಬರೆಯುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭಟ್ಕಳ ಮಂಡಲದ ಅಧ್ಯಕ್ಷರು ಹಾಗೂ ಜಿಲ್ಲಾ ಕಾರ್ಯದರ್ಶಿ ಶ್ರೀ ಸುಬ್ರಾಯ ದೇವಡಿಗ, ಮಾಜಿ ಶಾಸಕರಾದ ಶ್ರೀ ಸುನೀಲ್ ನಾಯ್ಕ, ಜಿಲ್ಲಾ ಸಹ ಕಾರ್ಯದರ್ಶಿ ಹಾಗೂ ಗೋಡೆ ಬರಹ ಅಭಿಯಾನದ ಸಂಚಾಲಕರಾದ ಶ್ರೀ ಶ್ರೀಕಾಂತ ನಾಯ್ಕ, ಎಸ್ ಟಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಚಂದ್ರು ಗೊಂಡ, ಮಂಡಲ ಪ್ರಧಾನ ಕಾರ್ಯದರ್ಶಿ ಶ್ರೀ ಭಾಸ್ಕರ ದೈಮನೆ, ನಗರ ಮಹಾಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಶ್ರೀ ಅರುಣ ನಾಯ್ಕ, ಹೆಬಳೆ ಪಂಚಾಯತ್ ಸದಸ್ಯರಾದ ಶ್ರೀ ವಿಜೇತ ಶೆಟ್ಟಿ ಹಾಗೂ ಹೊನ್ನಿಗದ್ದೆ ಬೂತ್ ನ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು.