ದೇವಸ್ಥಾನಕ್ಕೆ ದೇವಿಯ ದರ್ಶನಕ್ಕೆ ಹೊರಟ ಶಾಲಾ ಬಸ್ ಪಲ್ಟಿ- ಒಬ್ಬ ಮಹಿಳೆ ಸಾವು
ಶಿರಸಿ: ರಾಣಿಬೆನ್ನೂರಿನಿಂದ ಶಿರಸಿ ಕಡೆಗೆ ಪ್ರಯಾಣಿಸುತ್ತಿದ್ದ ಮಿನಿ ಶಾಲಾ ಬಸ್ ಪಲ್ಟಿಯಾಗಿ ಒಬ್ಬರು ಮೃತಪಟ್ಟು 12 ಜನ ಗಾಯಗೊಂಡ ಘಟನೆ ಬನವಾಸಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 766(ಇ) ಕುಮಟಾ-ಹಾವೇರಿ ಮಾರ್ಗ ಮಧ್ಯೆದ ಬುಗಡಿಕೊಪ್ಪ ಗ್ರಾಮದ ಭೂತೇಶ್ವರ ದೇವಸ್ಥಾನದ ಬಳಿ ಈ ಅಪಘಾತ ಸಂಭವಿಸಿದೆ.
ಅಪಘಾತವಾದ ಬಸ್ ರಾಣಿಬೆನ್ನೂರಿನ ಸಿದ್ದರೂಡ ನಗರದ ಪರಿಣಿತಿ ವಿದ್ಯಾಮಂದಿರದ ಶಾಲಾ ಬಸ್ ಆಗಿದ್ದು ಶಾಲಾ ಸಿಬ್ಬಂದಿಗಳು ಶಿರಸಿ ಮಾರಿಕಾಂಬಾ ದೇವಿಯ ದರ್ಶನಕ್ಕೆ ತೆರಳುತ್ತಿದ್ದರು ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಶಾಲಾ ಸಿಬ್ಬಂದಿ ಕಸ್ತೂರಮ್ಮ(50) ಮೃತಪಟ್ಟಿದ್ದು, 12ಜನ ಗಾಯಗೊಂಡಿದ್ದಾರೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಹನುಮಂತ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.