✒️: ಅದ್ದಿ ಬೊಳ್ಳೂರು
ಮಂಗಳೂರು: ‘ಆಟೋ ರಾಜ’ ಎಂದೇ ಗುರುತಿಸಿಕೊಂಡಿದ್ದು, ಇಳಿವಯಸ್ಸಿನಲ್ಲೂ ಆಟೋ ಓಡಿಸೋ ಮೂಲಕ ಮಂಗಳೂರಿನ ಮೊದಲ ಲೈಸೆನ್ಸ್ ಹೊಂದಿದ್ದ ಆಟೋ ಚಾಲಕ ಎಂಬ ಪ್ರಖ್ಯಾತಿಯ ಮೋಂತು ಲೋಬೋ (86 ವರ್ಷ) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ಮೃತಪಟ್ಟಿದ್ದಾರೆ.
ತಮ್ಮ 66 ವರ್ಷಗಳ ಚಾಲನಾ ಬದುಕಿನಲ್ಲಿ ಈವರೆಗೆ ಒಂದೇ ಒಂದು ಅಪಫಾತ ಎಸಗದ ದಾಖಲೆ ಇವರದ್ದು. 40 ಕಿ.ಮೀ ಒಳಗಿನ ವೇಗದಲ್ಲಿ ಆಟೋ ಓಡಿಸೋ ಇವರು ಟ್ರಾಫಿಕ್ ನಿಯಮ ಉಲ್ಲಂಘಿಸಿದ ಇತಿಹಾಸವೇ ಇರಲಿಲ್ಲ. 1935ರಲ್ಲಿ ಮಂಗಳೂರಿನಲ್ಲಿ ಜನಿಸಿದ ಮೋಂತು ಲೋಬೋ ಕಲಿತದ್ದು ಆರನೇ ತರಗತಿ. ಇದಾದ ಬಳಿಕ ಉದ್ಯೋಗದ ಕನಸು ಕಂಡವರು ಮೊಟ್ಟ ಮೊದಲ ಬಾರಿಗೆ ಲ್ಯಾಂಬ್ರೆಟ್ಟಾ ಆಟೋ ರಿಕ್ಷಾದಲ್ಲಿ ತಮ್ಮ ಮೊದಲ ಡ್ರೈವ್ ಆರಂಭಿಸಿದ ಲೋಬೊ, ಅಂದಿನ ಕಾಲಕ್ಕೆ ಮಂಗಳೂರಿನಲ್ಲಿ ಓಡಾಡಿದ ಏಳು ಆಟೋಗಳ ಪೈಕಿ ಮೋಂತು ಲೋಬೋ ಓಡಿಸಿದ ಆಟೋ ಮೊದಲನೆಯದ್ದು. ತನ್ನ 86ರ ವಯಸ್ಸಲ್ಲೂ ನಿರಾಯಾಸವಾಗಿ ಆಟೋ ಓಡಿಸ್ತಿದ್ದ ಮೋಂತು ಲೋಬೋ ತನ್ನ ಕೊನೆಯ ದಿನಗಳವರೆಗೂ ಆಟೋ ಓಡಿಸುತ್ತಿದ್ದರು .
ಕುಡಿತ, ಮಾದಕ ವಸ್ತುಗಳ ಸೇವನೆ ಇನ್ನಿತರ ಪ್ರಕರಣಗಳ ಮಧ್ಯೆ ನಿರ್ಲಕ್ಷ್ಯದಿಂದ ಆಟೋ ಓಡಿಸೋ ಇಂದಿನ ಕೆಲವೊಂದು ಚಾಲಕರಿಗೆ ಮೋಂತು ಲೋಬೋ ಮಾದರಿಯಾಗಿದ್ಧು, ಇಳಿ ವಯಸ್ಸಲ್ಲೂ ಇವರ ಆಟೋ ಓಡಿಸೋ ಉತ್ಸಾಹ ಕುಂದಿರಲಿಲ್ಲ. ಆದರೆ ಈ ಇಳಿ ವಯಸ್ಸಿನ ಸಾಧಕ ಇನ್ನು ನೆನಪು ಮಾತ್ರ.