ನಾಗಮಂಗಲ ವಿಧಾನಸಭಾ ಕ್ಷೇತ್ರದ ಬಿಜೆಪಿಗೆ ಸಮಾಜ ಸೇವಕ ಫೈಟರ್ ರವಿ ಸೇರ್ಪಡೆ
ಬೆಂಗಳೂರು. ನ:- 28 ನಾಗಮಂಗಲದ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಗೆ ಸುಭದ್ರ ನಾಯಕನ ಅವಶ್ಯಕತೆ ಇದ್ದು ಆ ಸ್ಥಾನಕ್ಕೆ ಇಂದು ಅಧಿಕೃತವಾಗಿ ಸಮಾಜ ಸೇವಕರಾದ ಫೈಟರ್ ರವಿ ಅವರು ಸೇರ್ಪಡೆಗೊಂಡಿದ್ದಾರೆ.
ಬೆಂಗಳೂರು ಭಾರತೀಯ ಜನತಾ ಪಾರ್ಟಿಯ ಕಚೇರಿಯಲ್ಲಿ ಸರಳ ಸಮಾರಂಭದೊಂದಿಗೆ ಸಚಿವರುಗಳಾದ ಅಶ್ವತ್ ನಾರಾಯಣ್. ಗೋಪಾಲಯ್ಯ ನಾರಾಯಣಗೌಡ ಅವರುಗಳ ಸಮ್ಮುಖದಲ್ಲಿ ಹಾಗೂ ಫೈಟರ್ ರವಿ ಯವರ ತಾಲೂಕಿನ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರುಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ನಾಗಮಂಗಲ ತಾಲೂಕಿನಲ್ಲಿ ಇಂದು ಅಧಿಕೃತವಾಗಿ ಭಾರತೀಯ ಜನತಾ ಪಾರ್ಟಿಗೆ ಜನನಾಯಕನಅವಶ್ಯಕತೆಯಿದ್ದು ಅಂತಹ ನಾಯಕರುಗಳ ಸಾಲಿನಲ್ಲಿ ಫೈಟರ್ ರವಿ ಅವರು ಅಧಿಕೃತವಾಗಿ ಸೇರ್ಪಡೆಗೊಂಡು ನಾಗಮಂಗಲ ತಾಲೂಕಿನಲ್ಲಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿಯೂ ಬಿಜೆಪಿಯ ಕಂಪನ್ನು ಹಾಗೂ ತಾಲೂಕಿನಲ್ಲಿ ಬಿಜೆಪಿ ಅಭಿಮಾನಿಗಳ ಉತ್ಸಾಹದ ಚಿಲುಮೆಯಾಗಿ ಪಕ್ಷದ ಬಲವರ್ಧನೆಗೆ ಸುಭದ್ರ ನಾಯಕರಾಗಿ ಹೊರಹೊಮ್ಮಲಿದ್ದಾರ