ಬಾಬರಿ ಮಸೀದಿ ನಿರ್ನಾಮ ಮಾಡಿದ ರೀತಿಯಲ್ಲೇ ಭಟ್ಕಳದ ಚಿನ್ನದ ಪಳ್ಳಿ ನಿರ್ನಾಮ ಮಾಡುತ್ತೆವೆ- ಉತ್ತರ ಕನ್ನಡ ಎಂ.ಪಿ ಅನಂತ ಕುಮಾರ ಹೆಗಡೆ
ಕುಮಟಾ- ಭಟ್ಕಳ, ಶಿರಸಿ ಹಾಗೂ ಶ್ರೀರಂಗಪಟ್ಟಣದಲ್ಲಿ ಇರುವ ಮಸೀದಿಗಳು ಹಿಂದೊಮ್ಮೆ ದೇವಸ್ಥಾನಗಳೇ ಆಗಿದ್ದವು. ಇದನ್ನು ಥ್ರೆಟ್ ಅಂತ ಬೇಕಾದರೂ ಅಂದುಕೊಳ್ಳಲಿ ಈ ಮಸೀದಿಗಳನ್ನು ಕಿತ್ತು ಹಾಕುವವರೆಗೆ ಹಿಂದೂ ಸಮಾಜ ಕುಳಿತುಕೊಳ್ಳಲಾರದು ಎಂದು ಹಿಂದೂ ಫೈರ್ ಬ್ರ್ಯಾಂಡ್ ಸಂಸದ ಅನಂತಕುಮಾರ ಬೆಂಕಿಯುಗಳಿದ್ದಾರೆ.
ಕುಮಟಾದಲ್ಲಿ ಶನಿವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಭಟ್ಕಳದ ಚಿನ್ನದಪಳ್ಳಿಯ ಮಸೀದಿ ಹಿಂದೂ ದೇವಸ್ಥಾನವಾಗಿತ್ತು. ಶಿರಸಿಯ ಸಿಪಿ ಬಜಾರ್ನಲ್ಲಿರುವ ದೊಡ್ಡ ಮಸೀದಿಯೇನಿದೆ ಅದು ವಿಜಯ ವಿಠ್ಠಲ ದೇವಸ್ಥಾನವಾಗಿತ್ತು. ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಮಾರುತಿ ದೇವಸ್ಥಾನ, ಇವತ್ತು ಹೋದರೂ ಅಲ್ಲಿ ಮಾರುತಿ ಮೂರ್ತಿ ಕಾಣುತ್ತದೆ. ದೇಶದ ಮೂಲೆ ಮೂಲೆಗಳಲ್ಲಿ, ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡ ಸಂಕೇತಗಳಿವೆ. ಅದನ್ನು ಕಿತ್ತು ಹಾಕುವ ತನಕ ಹಿಂದೂ ಸಮಾಜ ಮತ್ತೆ ವಾಪಾಸ್ ಕುಳಿತುಕೊಳ್ಳಲ್ಲ. ನಮಗೇನೂ ಮುಲಾಜು ಗಿಲಾಜು ಇಲ್ಲ, ಪತ್ರಿಕೆಯವರು ನೇರವಾಗಿ ಬರೆದುಕೊಳ್ಳಲಿ, ಕೆಲವರು ಇದನ್ನು ಥ್ರೆಟ್ ಅಂತಾನೂ ಅಂದುಕೊಳ್ಳಲಿ. ನಾವು ಮಾಡೋದು ಗ್ಯಾರಂಟಿಯೇ. ಇದು ಹಿಂದೂ ಸಮಾಜದ ತೀರ್ಮಾನ, ಅನಂತ ಕುಮಾರ್ ಹೆಗಡೆಯ ತೀರ್ಮಾನವಲ್ಲ ಎಂದು ಹೇಳಿದ್ದಾರೆ.
ರಣಭೈರವ ಎದ್ದಾಗಿದೆ, ಮತ್ತೆ ಕುಳಿತುಕೊಳ್ಳುವ ಪ್ರಶ್ನೆಯೇ ಇಲ್ಲ. ಇದು ಸೇಡು, ಸೇಡು, ಸೇಡು… ಸಾವಿರ ವರ್ಷದ ಸೇಡು ತೀರಿಸಿಕೊಳ್ಳದಿದ್ರೆ ಇದು ಹಿಂದೂ ರಕ್ತವಲ್ಲ ಎಂದು ಹಿಂದೂ ಸಮಾಜ ಹೇಳುತ್ತಿದೆ. ನಮ್ಮದು ಋಣವಿಟ್ಟುಕೊಂಡಿರುವ ಸಮಾಜವಲ್ಲ, ಋಣವನ್ನು ತೀರಿಸಿಯೇ ತೀರಿಸ್ತೇವೆ. ಸಾವಿರ ವರ್ಷಗಳ ಋಣವಿದೆ ನಮಗೆ, ಅದನ್ನು ತೀರಿಸದೇ ಸುಮ್ಮನೆ ಕುಳಿತರೆ ಅದಕ್ಕೆ ಹಿಂದೂ ರಕ್ತ ಅಂತಾ ಕರಿಯೋದೆ ಇಲ್ಲ ರಾಮಜನ್ಮಭೂಮಿಯ ಜತೆ ಮೊದಲ ಪ್ರಾರಂಭ ಶುರುವಾಗಿದೆ. ಇಡೀ ಹಿಂದೂ ಸಮಾಜವನ್ನು ಜಾತಿ, ಪ್ರಾದೇಶಿಕ, ಭಾಷೆ ಹೆಸರಿನಲ್ಲಿ ಒಡೆದರು. ಮೂರ್ಖರಾಮಯ್ಯನಂತವರು (ಸಿದ್ದರಾಮಯ್ಯ) ಇನ್ನೂ ಒಡೆಯುತ್ತಲೇ ಇದ್ದಾರೆ. ಆದರೂ ಇಂದು ಹಿಂದೂ ಸಮಾಜ ಒಟ್ಟಾಗಿ ನಿಂತುಕೊಂಡಿದೆ. ಹೊಸ ಗೆಲುವನ್ನು ಮುಂದಿನ ಶತಮಾನದಲ್ಲಿ ಕಾಣುವಂತಾಗಬೇಕು ಎಂದು ಹೇಳಿದ್ದಾರೆ.