ಕಲ್ಯಾಣ ರಾಜ್ಯ ಪ್ರಗತಿಪಕ್ಷವನ್ನು ಬಿಜೆಪಿಯೊಂದಿಗೆ ವಿಲೀನಗೊಳಿಸಿದ ಮಾಜಿ ಸಚಿವ , ಶಾಸಕ ಜನಾರ್ದನ ರೆಡ್ಡಿ
ಬೆಂಗಳೂರು-ಸೋಮವಾರ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್. ಯಡಿಯೂರಪ್ಪ ಹಾಗೂ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪ, ಲೋಕಸಭಾ ಚುನಾವಣಾ ರಾಜ್ಯ ಸಹ ಉಸ್ತುವಾರಿಗಳಾದ ಪೊಂಗುಲೇಟಿ ಸುಧಾಕರ ರೆಡ್ಡಿ ಅವರ ಸಮ್ಮುಖದಲ್ಲಿ ಬೆಂಗಳೂರಿನ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶಾಸಕ ಮಾಜಿ ಸಚಿವ ಜನಾರ್ಧನ ರೆಡ್ಡಿ ಮತ್ತು ಅವರ ಧರ್ಮಪತ್ನಿ ಲಕ್ಷ್ಮಿ ಅರುಣ ಹಾಗೂ ಮುಖಂಡರು, ನೂರಾರು ಕಾರ್ಯಕರ್ತರ ಜೊತೆಯಲ್ಲಿ ಅವರ ಕಲ್ಯಾಣ ರಾಜ್ಯ ಪ್ರಗತಿಪಕ್ಷವನ್ನು ಬಿಜೆಪಿ ಪಕ್ಷದೊಂದಿಗೆ ವಿಲೀನಗೊಳಿಸಿ ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡರು.
ನಂತರ ಮಾತನಾಡಿದ ಜನಾರ್ದನ ರೆಡ್ಡಿ ಮರಳಿ ತಾಯಿಯ ಮಡಿಲಲ್ಲಿ ಸೇರಿಕೊಂಡ ಮಗು. ಇಷ್ಟು ಸುಭದ್ರವಾಗಿ,ಸಂತೋಷವಾಗಿ ನನ್ನೆಲ್ಲಾ ಭಾವನೆಗಳೊಂದಿಗೆ ನನ್ನ ಮಾತೃ ಪಕ್ಷವಾದ ಭಾರತೀಯ ಜನತಾ ಪಾರ್ಟಿಗೆ ಮರಳಿ ಸೇರ್ಪಡೆಗೊಂಡಿದ್ದು, ತಾಯಿಯ ಮಡಿಲಲ್ಲಿನ ಮಗುವಿನ ಸಂತೋಷದಂತಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ. ಶ್ರೀರಾಮುಲು, ಶ್ರೀ ಸಿ.ಟಿ. ರವಿ, ಅಶ್ವಥ್ ನಾರಾಯಣ್, ಆನಂದ್ ಸಿಂಗ್, ಲೋಕಸಭಾ ಚುನಾವಣಾ ರಾಜ್ಯ ಸಹ ಉಸ್ತುವಾರಿಗಳಾದ ಸುಧಾಕರ್ ರೆಡ್ಡಿ, ಸಂಸದರಾದ ಪಿ. ಸಿ.ಮೋಹನ್, ದೇವೇಂದ್ರಪ್ಪ, ಎನ್ ರವಿ ಕುಮಾರ್, ನವೀನ್, ಎಸ್ ಕೆ ಬೆಳ್ಳುಬ್ಬಿ, ಡಾ. ಥಾಮಸ್, ಬಂಗಾರು ಹನುಮಂತ ಮತ್ತು ಪ್ರಮುಖರು ಉಪಸ್ಥಿತರಿದ್ದರು.