ಕಂದಗನೂರ ಗ್ರಾಮದಲ್ಲಿ ಕರ್ನಾಟಕ ಭೀಮ ಸೇನೆಯ ನೇತೃತ್ವದಲ್ಲಿ ಶಾಲಾ ಮಕ್ಕಳಿಗೆ ಅಂಬೇಡ್ಕರ್ ರವರ ಪುಸ್ತಕ ವಿತರಣೆ ಕಾರ್ಯಕ್ರಮ
ವಿಜಯಪುರ-ವಿಜಾಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಕಂದಗನೂರ ಗ್ರಾಮದಲ್ಲಿ ಸಂವಿಧಾನ ಸಮರ್ಪಣಾ ದಿನಾಚರಣೆಯ ಪ್ರಯುಕ್ತ ಕರ್ನಾಟಕ ಭೀಮ ಸೇನೆಯ ಮುದ್ದೇಬಿಹಾಳ ತಾಲೂಕ ಅಧ್ಯಕ್ಷ ಯಲ್ಲಪ್ಪ ಶ್ರೀ ಚಲವಾದಿ ಅವರ ನೇತೃತ್ವದಲ್ಲಿ ಪ್ರೌಢ ಶಾಲೆ ಮತ್ತು ಉರ್ದು ಶಾಲಾ ಮಕ್ಕಳಿಗೆ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ರವರ ಪುಸ್ತಕಗಳನ್ನು ವಿತರಣೆ ಮಾಡಲಾಯಿತು.”ಓದಿದವರು ಸಂವಿಧಾನ ಓದಲಿಲ್ಲ, ಸಂವಿಧಾನ ಓದಿದವರು ಅರ್ಥೈಸಿಕೊಳ್ಳಲಿಲ್ಲ, ಅರ್ಥೈಸಿಕೊಂಡವರು ಅದನ್ನು ಅಳವಡಿಸಿಕೊಳ್ಳಲಿಲ್ಲ” ಇದು ನಮ್ಮ ದೇಶದ ದೊಡ್ಡ ದುರಂತ. ಸಂವಿಧಾನದ ನಿರ್ಮಾತೃಗಳ ಆಶಯಗಳಿಗೆ ಬೆಲೆ ಬರಬೇಕಾದರೆ ವಿದ್ಯಾವಂತರು ಸಂವಿಧಾನದ ಮೌಲ್ಯಗಳನ್ನು ನಾಡಿನೆಲ್ಲೆಡೆ ತಿಳಿಸುವ ಕೆಲಸ ಮಾಡಲಿ. ಎಂದು ಈ ಕಾರ್ಯಕ್ರಮದಲಿ ಯಲ್ಲಪ್ಪ ಚಲವಾದಿ ಕರ್ನಾಟಕ ಭೀಮ ಸೇನೆಯ ತಾಲೂಕ ಅಧ್ಯಕ್ಷರು ಮಾತಾಡಿದರು.ಕುಸ್ತರ ಅಹಮದ ಚೋಪಾದರ, ಉಪಾಧ್ಯಕ್ಷರು,ಶಿದ್ರಮಪ್ಪ ಶಿವಣಗಿ, ಹುಲ್ಲಪ್ಪ ಕಣಕಾಲ, ಸಂಗನಗೌಡ ಬಿರಾದಾರ, ಎಸ್ ಆರ್ ಗೌಡರ್ ಮುಖ್ಯಗುರುಗಳು , ಎಂ ಬಿ ಬಿರಾದಾರ,ಶ್ರೀಶೈಲ ಬಿರಾದಾರ,
ಕೆ ಎಚ್ ಚವಾಣ್,ಮೌನೇಶ ಮಾದರ, ರಸೂಲ್ ಅಂಗಡಿ, ಸಂತೋಷ ಮಾದರ, ಬಸವರಾಜ ಚಲವಾದಿ, ಬಸವರಾಜ ಬಿರಾದಾರ, ಪ್ರಕಾಶ ಹಾದಿಮನಿ, ರೇಪಿಕ ನೈಕೋಡಿ,ಶ್ರೀಶೈಲ ಚಲವಾದಿ ಉಪಸ್ಥಿತರಿದ್ದರು.