ಹೊಸ ವರ್ಷದ ಪಾರ್ಟಿ ವೇಳೆ ಗೆಳೆಯರ ನಡುವಸ್ ಗಲಾಟೆ: ಬಿಯರ್ ಬಾಟಲಿಯಿಂದ ಹೊಡೆದು ಸ್ನೇಹಿತನ ಕೊಲೆ ಮಾಡಿದ ಗೆಳೆಯರು
ಚಿಕ್ಕಬಳ್ಳಾಪುರ-ಹೊಸ ವರ್ಷ ಪಾರ್ಟಿ ವೇಳೆ ಸ್ನೇಹಿತರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕು ಐಮರೆಡ್ಡಿಹಳ್ಳಿ ಬಳಿ ನಡೆದಿದೆ.
ನವೀನ್(30) ಹತ್ಯೆಗೀಡಾದ ಯುವಕನಾಗಿದ್ದು, ಸ್ನೇಹಿತರೆಲ್ಲ ಸೇರಿ ಕಳೆದ ರಾತ್ರಿ ಮದ್ಯ ಸೇವಿಸಿ ಪಾರ್ಟಿ ಮಾಡಿದ್ದು, ಬಳಿಕ ಐಮರೆಡ್ಡಿಹಳ್ಳಿ ಗ್ರಾಮದ ಬಳಿ ಇರುವ ಡಾಬಾವೊಂದರಲ್ಲಿ ಮತ್ತೆ ಮದ್ಯಪಾನ ಮಾಡಿದ್ದಾರೆ. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ್ದಾರೆನ್ನಲಾಗಿದೆ
ಜಗಳ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿದ್ದು, ಈ ವೇಳೆ ಪುನೀತ್ ಎಂಬಾತ ನವೀನ್ ನ ತಲೆಗೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿದ್ದಾನೆ. ಹಲ್ಲೆಯ ಪರಿಣಾಮ ನವೀನ್ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ದೊಡ್ಡ ಗಂಜೂರು ಗ್ರಾಮದ ಅರ್ಜುನ್, ಚೇತನ್ ಹಾಗೂ ಪುನೀತ್ ನನ್ನು ಪೊಲೀಸರು ವಶಕ್ಕೆ ಪಡದು ವಿಚಾರಣೆ ನಡೆಸುತ್ತಿದ್ದಾರೆ