ಪಿಂಪ್ ಸ್ಯಾಂಟ್ರೊ ರವಿ ವಿರುದ್ಧ ಮತ್ತೊಂದು ಹೊಸ ಕೇಸ್ ದಾಖಲು-ಪತ್ನಿಯಿಂದ ದೂರು ದಾಖಲು
ಮೈಸೂರು-ಪಿಂಪ್ ಸ್ಯಾಂಟ್ರೊ ರವಿ ವಿರುದ್ಧ ಮತ್ತೊಂದು ಹೊಸ ಕೇಸ್ ದಾಖಲಾಗಿದೆ. ಮೈಸೂರಿನ ದೇವರಾಜ ಪೋಲಿಸ್ ಸ್ಟೇಷನ್ ನಲ್ಲಿ ಸ್ಯಾಂಟ್ರೊ ರವಿ ವಿರುದ್ಧ ಸಂತ್ರಸ್ರ ಪತ್ನಿ ಪೋಲಿಸರಿಗೆ ನಿನ್ನೆ ದೂರು ನೀಡಿದ್ದಾಳೆ.
ಸೆಪ್ಟೆಂಬರ್ 22, 2022 ರಂದು ನಾನು ಮೈಸೂರಿನ ದೇವರಾಜ ಮಾರ್ಕೆಟ್ ಗೆ ಹೋಗಿದ್ದೆ. ನನ್ನ ಸ್ಕೂಟರ್ ಡಿಕ್ಕಿಯಲ್ಲಿ ಚೆಕ್ ಬುಕ್ ಇಟ್ಟಿದ್ದೆ ಸ್ಯಾಂಟ್ರೊ ರವಿ ಮತ್ತು ಪ್ರಕಾಶ್ ಸ್ಕೂಟರ್ ಡಿಕ್ಕಿ ಹೊಡೆದು ಚೆಕ್ ಬುಕ್ ಕಳುವು ಮಾಡಿದ್ದಾರೆ. ನನ್ನ ಚೆಕ್ ಬುಕ್ ನ್ನು ದುರುಪಯೋಗ ಮಾಡಿಕೊಂಡಿ ದ್ದಾರೆ. ನಾನು ಸೈನ್ ಮಾಡಿರುವ ಎರಡು ಚೆಕ್ ನ್ನು ಕೆನರಾ ಬ್ಯಾಂಕ್ ಗೆ ಪ್ರೊಡ್ಯೂಸ್ ಮಾಡಿದ್ದಾರೆ. ಇನ್ನೇರಡು ಚೆಕ್ ನ್ನು ಹಾಗೆ ಇಟ್ಟುಕೊಂಡಿದ್ದಾರೆ.ಈ ಸಂಬಂಧ ಇದೇ ದೇವರಾಜ ಪೋಲಿಸ್ ಸ್ಟೇಷನ್ ನಲ್ಲಿ ಸೆಪ್ಟೆಂಬರ್ 24 ರಂದು ದೂರು ನೀಡಿದ್ದೆ ಎಂದು ಮೈಸೂರಿನ ದೇವರಾಜ ಪೋಲಿಸ್ ಸ್ಟೇಷನ್ ಗೆ ಸ್ಯಾಂಟ್ರೊ ರವಿ ಪತ್ನಿ ಪತಿ ವಿರುದ್ಧ ದೂರು ನೀಡಿದ್ದಾಳೆ.
ಈ ಸಂಬಂಧ ಸ್ಯಾಂಟ್ರೊ ರವಿ ವಿರುದ್ಧ ಐಪಿಸಿ 465, 468, 506, 420 ಹಾಗೂ 34 ಸೆಕ್ಷನ್ ಗಳನ್ನು ದಾಖಲಿಸಲಾಗಿದೆ. ಈಗ ಸ್ಯಾಂಟ್ರೊ ರವಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಸ್ಯಾಂಟ್ರೊ ರವಿ ಕೇಸ್ ಸಿಐಡಿಗೆ ವರ್ಗಾವಣೆ ಹಿನ್ನೆಲೆ ಮೈಸೂರಿನಲ್ಲಿ ಸಿಐಡಿ ಡಿವೈಎಸ್ಪಿ ನೇತೃತ್ವದ ನಾಲ್ವರು ಮೈಸೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಪೋಲಿಸ್ ತನಿಖಾಧಿಕಾರಿ ಎಸಿಪಿಯಿಂದ ದಾಖಲಾತಿ ವಶಕ್ಕೆ ಪಡೆದಿದ್ದಾರೆ. ಸ್ಯಾಂಟ್ರೊ ರವಿಯನ್ನು ತಮ್ಮ ವಶಕ್ಕೆ ನೀಡುವಂತೆ ಇಂದು ಮೈಸೂರು ಕೋರ್ಟ್ ಗೆ ಸಿಐಡಿ ಅಧಿಕಾರಿಗಳು ಪಿಟಿಷನ್ ಸಲ್ಲಿಸಲಿದ್ದಾರೆ.