ಅಫಜಲಪುರ ಪೊಲೀಸ್ ಠಾಣೆಯ ಪಿ.ಎಸ್.ಐ ಕೈಯಲ್ಲಿದ್ದ ರಿವಾಲ್ವರ್ ಕಸಿದುಕೊಂಡು ಪರಾರಿಯಾದ ಕಳ್ಳ
ಅಫಜಲಪುರ-ಕುಖ್ಯಾತ ಕಳ್ಳನೊಬ್ಬ ಪೊಲೀಸ್ ಸಬ್ ಇನ್ಸ್ಸ್ಪೆಕ್ಟರ್ನ ಸರ್ವಿಸ್ ರಿವಾಲ್ವರ್ ಕಸಿದುಕೊಂಡು ಪರಾರಿಯಾದ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ಪಟ್ಟಣದಲ್ಲಿ ನಡೆದಿದೆ. ಖಾಜಪ್ಪ ಎಂಬ ಕಳ್ಳ ಅಫಜಲಪುರದ PSI ಭೀಮರಾಯ್ ಬಂಕಲಿ ಅವರ ಸರ್ವಿಸ್ ರಿವಾಲ್ವರ್ ಕಸಿದು ಕಾಲ್ಕಿತ್ತಿದ್ದಾನೆ.
ಖಾಜಪ್ಪನನ್ನ ಬಂಧಿಸಲು ಸಿಸಿಬಿ ಪೊಲೀಸರು ಬೆಂಗಳೂರಿನಿಂದ ಅಫಜಲಪುರಕ್ಕೆ ಆಗಮಿಸಿದ್ದರು. ಆದರೆ ಆತನನ್ನು ಬಂಧಿಸುವ ವೇಳೆ ಅಫಜಲಪುರ ಪಿಎಸ್ಐ ಭೀಮರಾಯ್ ಸರ್ವಿಸ್ ರಿವಾಲ್ವರ್ ಕಸಿದು ಎಸ್ಕೇಪ್ ಆಗಿದ್ದಾನೆ.
ಖಾಜಪ್ಪ ಬಳ್ಳೂರ್ಗಿ ಮೂಲದವನಾಗಿದ್ದು, ಬೆಂಗಳೂರು, ಅಫಜಲಪುರ, ಕಲಬುರಗಿ ಸೇರಿದಂತೆ ವಿವಿಧೆಡೆ 20 ಕ್ಕೂ ಅಧಿಕ ಕಳ್ಳತನ ಪ್ರಕರಣ ಈತನ ಮೇಲಿತ್ತು. ಈತನನ್ನ ಹಿಡಿಯಲೆಂದು ಪೊಲೀಸರು ಪ್ಲಾನ್ ಕೂಡ ಹೆಣೆದಿದ್ದರು. ಆದರೆ ಖಾಜಪ್ಪ ಬಂಧನದ ವೇಳೆ ಸರ್ವಿಸ್ ರಿವಾಲ್ವರ್ ಕಸಿದು ಜೂಟ್ ಆಗಿದ್ದಾನೆ.
ಇನ್ನು ಅಫಜಲಪುರ ಠಾಣೆಗೆ ಕಲಬುರಗಿ ಎಸ್ಪಿ ಇಶಾ ಪಂತ್ ಭೇಟಿ ನೀಡಿ ಘಟನೆಯ ಬಗ್ಗೆ ವಿಚಾರಿಸಿದ್ದಾರೆ.