ರಾಜ್ಯದ ಸರ್ಕಾರಿ ನೌಕರರಿಗೆ ಘೋಷಣೆ ಯಾಯಿತು 7ನೇ ವೇತನ ಆಯೋಗ: ವೇತನ ಆಯೋಗದ ಜವಾಬ್ದಾರಿ ನಿವೃತ್ತ IAS ಅಧಿಕಾರಿ ಸುಧಾಕರ್ ರವರಿಗೆ ನೀಡಿದ ಮುಖ್ಯಮಂತ್ರಿ
ಬೆಂಗಳೂರು:ರಾಜ್ಯದ ಸರ್ಕಾರಿ ನೌಕರರಿಗೆ ಕೊನೆಗೂ 7 ನೇ ವೇತನ ಆಯೋಗ ಘೋಷಣೆ ಯಾಗಿದ್ದು ಮುಖ್ಯಮಂತ್ರಿ ಇಂದು ಆಯೋಗದ ಜವಾಬ್ದಾರಿ ಯನ್ನು ನಿವೃತ್ತ ಐಎಎಸ್ ಅಧಿಕಾರಿ ಸುಧಾಕರ್ ಅವರಿಗೆ ನೀಡಿದ್ದಾರೆ.ಮಾಹಿತಿಯನ್ನು ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ದಾವಣಗೆರೆಯಲ್ಲಿ ಮಾಧ್ಯಮದ ಮೂಲಕ ಘೋಷಿಸಿದ್ದಾರೆ.
ಇನ್ನೂ ಕಳೆದ ಹಲವಾರು ದಿನಗಳಿಂದ ಈ ಒಂದು ವಿಚಾರ ಕುರಿತು ಷಡಾಕ್ಷರಿ ಅವರು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಧ್ವನಿಯಾಗಿ ಒತ್ತಾಯ ಮಾಡುತ್ತಿದ್ದರು.ಈ ಹಿನ್ನಲೆಯಲ್ಲಿ ನಾಳೆ 10-11-22 ರ ಬೆಳಗ್ಗೆ 10:30ಕ್ಕೆ ಬೆಂಗಳೂರಿನ ಮುಖ್ಯಮಂತ್ರಿಗಳ ಅಧಿಕೃತ ನಿವಾಸದಲ್ಲಿ ಅಭಿನಂದನೆಯನ್ನು ಆಯೋಜಿಸಲಾಗಿದ್ದು ಕಡ್ಡಾಯವಾಗಿ ಎಲ್ಲ ಜಿಲ್ಲಾಧ್ಯಕ್ಷರು ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ಹಾಗೂ ನಿರ್ದೇಶಕರು ಆಗಮಿಸುವಂತೆ ರಾಜ್ಯಾಧ್ಯಕ್ಷರು ವಿನಂತಿಸಿದ್ದಾರೆ.