ಡಿ. ೨೩ ರಿಂದ ೨೫ ಶಿರಸಿಯಲ್ಲಿ ರಾಜ್ಯ ಮಟ್ಟದ ವಕೀಲರ ಮೇಳ.
ಶಿರಸಿ: ರಾಜ್ಯಮಟ್ಟದ ವಕೀಲರ ಕ್ರೀಡಾ ಮತ್ತು ಸಾಂಸ್ಕçತಿಕ ಸ್ಫರ್ಧೇ, ಡಿ. ೨೩ ರಿಂದ ೨೫ ರವರೆಗೆ ಶಿರಸಿಯಲ್ಲಿ ಜರಗುವ ವಕೀಲರ ಮೇಳ- ೨೦೨೩ ರಲ್ಲಿ ಸಂಘಟಿಸಲಾಗಿದೆ ಎಂದು ಸ್ಪಂಧನಾ ಲೀಗಲ್ ಅಕಾಡೆಮಿ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಕೀಲರ ಮೇಳ- ೨೦೨೩ ರಲ್ಲಿ ಕ್ರೀಡಾ ವಿಭಾಗದಲ್ಲಿ ಪುರುಷ ವಕೀಲರಿಗೆ ಟೆನಿಸ್ ಬಾಲ್ ಕ್ರಿಕೇಟ್ ಮತ್ತು ಶೆಟಲ್ ಬ್ಯಾಡ್ಮಿಟನ್ (ಡಬಲ್ಸ ಮತ್ತು ಮಿಕ್ಸ ಡಬಲ್ಸ) ಹಾಗೂ ಮಹಿಳಾ ವಕೀಲರಿಗೆ ಥ್ರೋಬಾಲ್ ಸ್ಫರ್ದೆಗೆ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.ಸಾಂಸ್ಕçತಿಕ ವಿಭಾಗದಲ್ಲಿ ಪುರುಷ ಮತ್ತು ಮಹಿಳಾ ವಕೀಲರಿಗೆ ಪ್ರತ್ಯೇಕವಾಗಿ ಜಾನಪದ ಗೀತೆ, ಸುಳ್ಳು ಹೇಳುವ ಸ್ಫರ್ಧೆ, ಛದ್ಮವೇಶ ಸ್ಫರ್ಧೆ, ಹಿಂದಿ ಚಲನಚಿತ್ರ ಗೀತೆ ಅಥವಾ ಕನ್ನಡ ಚಲನಚಿತ್ರ ಗೀತೆ ಮತ್ತು ಫ್ಯಾಷನ್ ಶೋ ಸ್ಫರ್ಧೆ ಜರುಗಲಿದ್ದದ್ದು ಇರುತ್ತದೆ. ಪುರುಷ ಮತ್ತು ಮಹಿಳಾ ವಕೀಲರ ತಂಡದ ಗುಂಪು ಹಾಡುವ ಸ್ಫರ್ಧೆ, ಮಹಿಳೆಯರಿಗೆ ಗುಂಪು ನೃತ್ಯ ಏರ್ಪಡಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ವಕೀಲರ ಮೇಳದ ಉದ್ಘಾಟನೆ ಡಿಸೆಂಬರ್ ೨೩ ರ ರಾತ್ರಿ ೭:೩೦ ಕ್ಕೆ ಜರುಗಲಿದ್ದು ಬಹುಮಾನ ವಿತರಣೆಯನ್ನ ಡಿಸೆಂಬರ್ ೨೫ ರ ರಾತ್ರಿ ೯ ಗಂಟೆಗೆ ಜರುಗಲಿದೆ.ಪ್ರವೇಶ ಪತ್ರ:
ಪ್ರವೇಶ್ ಪತ್ರವನ್ನ ಅಧ್ಯಕ್ಷ, ಲೀಗಲ್ ಅಕಾಡೆಮಿ ಶಿರಸಿ ಇವರಿಗೆ ನಿರ್ದಿಷ್ಟ ಪಡಿಸಿದ ಪ್ರವೇಶ ಪತ್ರದೊಂದಿಗೆ, ಡಿಸೆಂಬರ್ ೮, ೨೦೨೩ ರ ಒಳಗೆ ಕಳುಹಿಸಬೇಕೆಂದು ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ