ನೆಲಮಂಗಲ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದಲ್ಲಿ ಗಬ್ಬು ನಾರುತ್ತಿರುವ ಶಾಲಾ ಶೌಚಾಲಯಗಳು
ನೆಲಮಂಗಲ : ಬೆಂಗಳೂರಿನ ಹೆಬ್ಬಾಗಿಲು ಎಂದೇ ಪ್ರಸಿದ್ಧವಾಗಿರುವ ನೆಲಮಂಗಲ ಶಾಲಾ ವಾತಾವರಣ ಗಬ್ಬುನಾರುತ್ತಿದ್ದು ಶೋಚನೆಯಾದಂತಹ ಸಂಗತಿ, ಇಲಾಖೆಯಿಂದ ಬಿಡುಗಡೆಯಾಗಿರುವ ಅನುದಾನವನ್ನ ಶಾಲೆಯ ಉಪ ಪ್ರಾಂಶುಪಾಲರು ಶಾಲೆಯ ಶೌಚಾಲಯವನ್ನು ಸ್ವಚ್ಛತೆಗೊಳಿಸದೆ ಹಾಳು ಮಾಡಿರುತ್ತಾರೆ ಎಂಬುದು ಅನೇಕ ವಿದ್ಯಾರ್ಥಿಗಳ ಆಪಾದನೆಯಾಗಿದೆ, ಶಾಲೆಯ ವಾಸ್ತವತೆಯನ್ನು ಪರಿಶೀಲಿಸುವುದರಲ್ಲೂ ಕೂಡ ನೆಲಮಂಗಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಇತರೆ ಅಧಿಕಾರಿಗಳು ಅಸಮರ್ತರಾಗಿದ್ದಾರೆ ಎಂಬುದು ಅರ್ಥವಾಗುವ ವಿಚಾರವಾಗಿರುತ್ತದೆ.
ಕಲುಷಿತ ವಾತಾವರಣದಿಂದ ಅನೇಕ ರೋಗ ರುಜಿನಗಳು ಬರುವ ಎಲ್ಲಾ ಲಕ್ಷಣಗಳಿದ್ದರೂ ಕೂಡ ಬಂದ ಅನುದಾನದ ಹಣವನ್ನು ದುರ್ಬಳಕೆ ಮಾಡಿಕೊಂಡು ಕಂಡರು ಕಾಣದಂತೆ ಇಂತಹ ನಾಲಾಯಕ್ ಉಪ ಪ್ರಾಂಶುಪಾಲರು ಶಾಲೆಗೆ ಅವಶ್ಯಕತೆ ಇದೆಯಾ? ಇಂಥ ನಾಲಾಯಕ್ ಗಳ ಮೇಲೆ ಕ್ರಮ ಜರುಗಿಸದ ಮೇಲಾಧಿಕಾರಿಗಳ ವರ್ತನೆ ಗಮನಿಸಿದರೆ ಇವರಿಗೆ ಎಷ್ಟು ಪಾಲು ಹೋಗಿದೆ ಎಂಬುದು ಯಕ್ಷ ಪ್ರಶ್ನೆಯಾಗಿರುತ್ತದೆ. ಇಷ್ಟೇ ಅಲ್ಲದೆ ಅನೇಕ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶಾಲೆಗಾಗಿ ಬಂದಂತಹ ಅನುದಾನಗಳನ್ನ ಶಾಲೆಯ ಉಪ ಪ್ರಾಂಶುಪಾಲರು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಶಾಲೆಯ ಪರಿಸರದಲ್ಲಿ ಪಿಸು ಪಿಸು ಮಾತನಾಡುತ್ತಿದ್ದಾರೆ, ಇನ್ನಾದರೂ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಾರ ಕಾದು ನೋಡಬೇಕಿದೆ.