ವಿಶ್ವ ನ್ಯೂಮೋನಿಯ ದಿನಾಚರಣೆ
ನಾಗಮಂಗಲ.ನ:-12 ಕೇಂದ್ರೀಯ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆವತಿಯಿಂದ ವಿಶ್ವ ನ್ಯೂಮೋನಿಯ ದಿನಾಚರಣೆಯನ್ನು ಜುಟ್ಟನಹಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.
ನಾಗಮಂಗಲ ತಾಲೂಕಿನ ಕೇಂದ್ರೀಯ ಯೋಗ ಮತ್ತು ಪ್ರಕೃತಿಚಿಕಿತ್ಸಾ ಆಸ್ಪತ್ರೆಯ ವೈದ್ಯೆಯಾದ ಡಾ. ಅಖಿಲಾ. ಅವರು ನ್ಯೂಮೋನಿಯ ಎಂದರೇನು? ರೋಗ ಲಕ್ಷಣಗಳು, ರೋಗ ಪತ್ತೆ ಹಚ್ಚುವಿಕೆ, ನಿಯಂತ್ರಿಸಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡುವುದರ ಜೊತೆಗೆ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆಯನ್ನು ನಡೆಸಿದರು.
ಶ್ವಾಸಕೋಶಗಳಆರೋಗ್ಯವನ್ನು ಯೋಗದ ಮೂಲಕ ಹೇಗೆ ಕಾಪಾಡಿಕೊಳ್ಳಬೇಕೆಂದು ಯೋಗತಜ್ಞರಾದ ಮುತ್ತುರಾಜ್ ಶಿಂಧೆ ಅವರು ವಿವರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಯಾದ ಶ್ರೀಮತಿ ಸೌಭಾಗ್ಯ, ಆಸ್ಪತ್ರೆಯ ಸಿಬ್ಬಂದಿಯಾದ ಯಶವಂತ ಮತ್ತು ಮಕ್ಕಳು ಉಪಸ್ಥಿತರಿದ್ದರು