ನಾಗಮಂಗಲದ ಮನೆ ಒಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್
ನಾಗಮಂಗಲ.ನ:- 14 ನಾಗಮಂಗಲ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಹಿಂಭಾಗದ ಮನೆಯೊಂದರಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯ ಉಪಕರಣಗಳು ಭಸ್ಮವಾಗಿದೆ.
ನಾಗಮಂಗಲ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜ್ ಹಿಂಭಾಗದ ಜೆಸಿಪಿ ಮಂಜು ಎಂಬವರು ಬಾಡಿಗೆಯಲ್ಲಿದ್ದು ಸೋಮವಾರ ಮಧ್ಯಾಹ್ನ ಮನೆಯವರು ಹೊರಗಡೆ ಹೋಗಿದ್ದು ಆಕಸ್ಮಿಕವಾಗಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಮನೆಯಲ್ಲಿರುವ ಗೃಹ ಉಪಕರಣಗಳು ಟಿವಿ. ಫ್ರಿಡ್ಜ್ ಅನೇಕ ವಸ್ತುಗಳು ಭಸ್ಮವಾಗಿದ್ದು ಬೆಳಕಿಗೆ ಬಂದಿದೆ.
ಈ ಮನೆಯು ರಾಘವೇಂದ್ರ ಎಂಬವರಿಗೆ ಒಡೆತನವಾಗಿದ್ದು ಸಾರ್ವಜನಿಕರು ಈ ಮನೆಯಿಂದ ಹೊಗೆಯನ್ನು ಕಂಡು ತಕ್ಷಣ ಅಗ್ನಿಶಾಮಕಕ್ಕೆ ತಿಳಿಸಿದ್ದು ಕೂಡಲೇ ತಳಕ್ಕೆ ಆಗಮಿಸಿದ್ದು ನಂದಿಸಿದ್ದಾರೆ