ಮೂಡಿಗೆರೆ ತಾಲೂಕಿನ ಶಿಕ್ಷಕಿ,ನಿರೂಪಕಿ, ಯುವ ಗಾಯಕಿ ಡಾ.ವಿದ್ಯಾ ಕೆ ಅವರಿಗೆ ಭಾರತ ಸೇವಾ ರತ್ನ ಪ್ರಶಸ್ತಿ
ಬೆಂಗಳೂರು- ಚೇತನ ಪೌಂಡೇಶನ್ ಕರ್ನಾಟಕ ಮತ್ತು ಕಾವ್ಯಶ್ರೀ ಚಾರಿಟೇಬಲ ಟ್ರಸ್ಟ್ ಬೆಂಗಳೂರು ಇವರ ಸಹಯೋಗದಲ್ಲಿ ದಿನಾಂಕ 18 ಆಗಸ್ಟ್ ರವಿವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಾಲದ ವಂದೇ ಮಾತರಂ ಕಾರ್ಯಕ್ರಮ ದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಶಿಕ್ಷಕಿ,ನಿರೂಪಕಿ, ಯುವ ಗಾಯಕಿ ಡಾ.ವಿದ್ಯಾ ಕೆ ಅವರಿಗೆ ಇವರ ಸಾಹಿತ್ಯ, ಕಲೆ , ಶಿಕ್ಷಣ ಮತ್ತು ಸಮಾಜ ಸೇವೆಗಾಗಿ ಭಾರತ ಸೇವಾ ರತ್ನ ಪ್ರಶಸ್ತಿಯನ್ನು ಚೇತನಾ ಪೌಂಡೇಶನ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಅವರು ನೀಡಿದರು.
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪುಸಭಾಂಗಣದಲ್ಲಿ ಆಯೋಜಿಸಾಲದ ವಂದೇ ಮಾತರಂ ಕಾರ್ಯಕ್ರಮದಲ್ಲಿ ಇಂದು ಚೇತನಾ ಪೌಂಡೇಶನ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ ಅವರು ಯುವ ಗಾಯಕಿ, ಶಿಕ್ಷಕಿ ಡಾ.ವಿದ್ಯಾ ಕೆ ಮೂಡಿಗೆರೆ ಅವರಿಗೆ
ಶಾಶ್ವತ ಪ್ರಶಸ್ತಿ ಫಲಕ ಮತ್ತು ಭಾರತ ಸೇವಾ ರತ್ನ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.ಈ ಕಾರ್ಯಕ್ರಮದಲ್ಲಿ ಚಿತ್ರ ಸಾಹಿತಿ, ನಟ,ಡಾ.ವಿ.ನಾಗೇಂದ್ರ ಪ್ರಸಾದ್, ಚಿತ್ರ ನಟ ಮಹೇಂದ್ರ , ಸಾಹಿತಿ ಡಾ.ಶಿವಣ್ಣ ಕೆ, ಕವಯತ್ರಿ ಪ್ರಿಯ ಸುಳ್ಯ, ಪ್ರಿಯ ಮಧುಸೂದನ ಮುಂತಾದವರು ಉಪಸ್ಥಿತರಿದ್ದರು.