ಸಮರ್ಥ ಕನ್ನಡಿಗರು ರಾಜ್ಯ ಪ್ರಶಸ್ತಿಗೆ ಭಾಜನರಾದ ಟೀಮ್ ಕಾಡ ಅಗ್ರಹಾರ
ಮಹದೇವಪುರ : ಸತತ ಹೋರಾಟ ಹಾಗೂ ಅವಿರತ ಪ್ರಯತ್ನದಿಂದ 13.5 ಗುಂಟೆ ( 14816 ಚ.ಅ. – 4.5 ಕೋಟಿ ಮೌಲ್ಯ) ಸರ್ಕಾರಿ ಗ್ರಾಮ ಠಾಣಾ ಭೂಮಿ ಒತ್ತುವರಿ ತೆರವುಗೊಳಿಸಿ ನಿಸ್ವಾರ್ಥರಾಗಿ ಸಾಧನೆಗೈದು ಸಮಾಜಕ್ಕೆ ಮಾದರಿಯಾಗಿ, ಯುವ ಸಮೂಹಕ್ಕೆ ಸ್ಫೂರ್ತಿಯಾಗಿ ಎಲೆ ಮರಿಕಾಯಿಯಂತಿದ್ದಂತಹ ‘ಟೀಮ್ ಕಾಡ ಅಗ್ರಹಾರ’ ಯುವಕರ ಸಾಧನೆಯನ್ನು ಕನ್ನಡ ಸಂಸ್ಥೆಯಾದ ‘ಸಮರ್ಥ ಕನ್ನಡಿಗರು’ (ನೋಂ), ಬೆಂಗಳೂರು ಇವರು ಗಮನಿಸಿ ಈ ಸಾಲಿನಲ್ಲಿ ಕೊಡಗು ಜಿಲ್ಲಾ ಘಟಕದ ವತಿಯಿಂದ ಮಡಿಕೇರಿಯ ಲಯನ್ಸ್ ಸಭಾಂಗಣದಲ್ಲಿ ದಿನಾಂಕ 06-11-2022 ರ ಭಾನುವಾರದಂದು ಜರುಗಿದ “ನಿಮ್ಮ ಪ್ರತಿಭೆ – ನಮ್ಮ ವೇದಿಕೆ – 2022 ಕನ್ನಡ ಹಬ್ಬ” ಎಂಬ ವಿನೂತನ ಸಮಾರಂಭದಲ್ಲಿ ‘ಟೀಮ್ ಕಾಡ ಅಗ್ರಹಾರ’ ಯುವಕರ ಬಳಗಕ್ಕೆ “ಸಮರ್ಥ ಕನ್ನಡಿಗರು” ನಾಮಾಂಕಿತ ರಾಜ್ಯ ಪ್ರಶಸ್ತಿ – ಪುರಸ್ಕಾರ ನೀಡಿ ಗೌರವಾದರಗಳಿಂದ ಸನ್ಮಾನ ಮಾಡಲಾಯಿತು.
ಈ ವೇಳೆಯಲ್ಲಿ ಯುವ ಸಾಮಾಜಿಕ ಹೋರಾಟಗಾರರಾದ ಎನ್.ಐ.ಬಿ. ಶಿವರಾಜ್, ಮಾರೇಗೌಡ.ಜಿ, ಮನೋಜ್ ಕುಮಾರ್.ಎಂ, ಬಾಲಕೃಷ್ಣ.ವಿ, ಮುನಿರಾಜ್.ಜಿ, ಶ್ರೀಕಾಂತ್.ಎಸ್, ಯಲ್ಲಪ್ಪ.ಕೆ ಅವರು ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಎಲ್ಲರೂ ಒಗ್ಗೂಡಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕಾಡ ಅಗ್ರಹಾರ ಗ್ರಾಮಸ್ಥರು ಹಾಗೂ ಗ್ರಾಮದ ಹಿರಿಯರು ಮುಖಂಡರಾದ ಮುನಿಕಾಟಪ್ಪ (ದುಬೈ), ಎನ್.ಐ.ಬಿ. ಕಾಂತರಾಜ್, ರಘು.ಕೆ, ಕಾಂತರಾಜ್.ಕೆ, ಸುಧೀಶ್, ಸತೀಶ್, ರವಿಚಂದ್ರ.ಕೆ, ಸಂತೋಷ್, ರವಿಕುಮಾರ್, ಕಾಂತೇಶ್, ದೀಪಕ್, ಮುನಿರಾಜ್.ಎಂ ಹಾಗೂ ಗ್ರಾಮಸ್ಥರು ಮಾತನಾಡಿ ನಮ್ಮ ‘ಟೀಮ್ ಕಾಡ ಅಗ್ರಹಾರ’ಕ್ಕೆ ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿರುವುದು ಅತೀವ ಸಂತೋಷ ತಂದಿರುವುದರ ಜೊತೆಗೆ ಗ್ರಾಮಕ್ಕೆ ಮತ್ತು ಗ್ರಾಮಸ್ಥರೆಲ್ಲರಿಗೂ ಅಂತ್ಯಂತ ಹೆಮ್ಮೆಯ ವಿಷಯವೆಂದು ತಮ್ಮ ಹರ್ಷ ವ್ಯಕ್ತಪಡಿಸಿ ಅಭಿಪ್ರಾಯವನ್ನು ಹಂಚಿಕೊಂಡರು.