*ಕೇದಾರೋತ್ಥಾನ ರೈತ ಉತ್ಪಾದಕ ಕಂಪನಿಯಿಂದ ಹಡಿಲು ಭೂಮಿ ನಾಟಿ ಕಾರ್ಯಕ್ಕೆ ಚಾಲನೆ*
ಉಡುಪಿ :ಜಲಾನಯನ ಇಲಾಖೆ, ಕೃಷಿ ಇಲಾಖೆ ಹಾಗೂ ಸ್ಕೊಡವೆಸ್ ಸಂಸ್ಥೆಯಿಂದ ರಚಿತವಾದ
ಕೇದಾರೋತ್ಥಾನ ರೈತ ಉತ್ಪಾದಕ ಕಂಪನಿಯಿಂದ ಹಡಿಲು ಭೂಮಿ ಕೃಷಿ ಯೋಜನೆಯಡಿಯಲ್ಲಿ ಇಲ್ಲಿನ ಮೂಡುಬೆಟ್ಟು ಬಳಿಯ ಮಂಡೆಚಾವಡಿ ವಿಷ್ಣು ಮೂರ್ತಿ ದೇವಸ್ಥಾನದ ಹತ್ತಿರದ ಗದ್ದೆಗಳಲ್ಲಿ ನಾಟಿ ಕಾರ್ಯ ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ಕೃಷಿಕರಾದ ಪ್ರಕಾಶ ಹಾಗೂ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಸುದರ್ಶನ ಉಪಾಧ್ಯ ಉಪಸ್ಥಿತರಿದ್ದರು.
ಕೇದಾರೋತ್ಥಾನ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷರೂ, ಮಾಜಿ ಶಾಸಕರೂ ಆದ ರಘುಪತಿ ಭಟ್ ಅವರ ನೇತ್ರತ್ವದಲ್ಲಿ ಉಡುಪಿ ಜಿಲ್ಲೆಯಲ್ಲಿ ಹಡಿಲು ಭೂಮಿಯಲ್ಲಿ ಭತ್ತದ ಸಾವಯವ ಕೃಷಿಗೆ ಉತ್ತೇಜನ ನೀಡುವ ಕಾರ್ಯ ಪ್ರಾರಂಭವಾಗಿದೆ. ಕಂಪನಿಯ ಮೂಲಕ ಕರಾವಳಿಯಲ್ಲಿ ಬೆಳೆದ ಕೇದಾರ ಕಜೆ ಕುಚ್ಚಲಕ್ಕಿಯನ್ನು ರಾಜ್ಯ ಮತ್ತು ಹೊರರಾಜ್ಯದ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.