*ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನ,ಕೋಟ ಇದರ 27ನೇ ವರ್ಷದ ಕಾರ್ತಿಕ ದೀಪೋತ್ಸವ*
*ಕೋಟ*: ಉಡುಪಿ ಜಿಲ್ಲೆಯ ಕೋಟದ ಹಾಡಿಕೆರೆಬೆಟ್ಟುವಿನಲ್ಲಿ ಪ್ರತಿಷ್ಠಾನೆಗೊಂಡ ಶಾಂತಮೂರ್ತಿ ಶ್ರೀ ಶನೀಶ್ವರ ದೇವಸ್ಥಾನ,ಇದರ 27ನೇ ವರ್ಷದ ಕಾರ್ತಿಕ ದೀಪೋತ್ಸವವು
ನ. 12 ರಂದು ಶನಿವಾರ ಜರುಗಲಿರುವುದು.
ಅಂದು ಬೆಳಿಗ್ಗೆ 9 ಘಂಟೆಗೆ
“ಸಾಮೂಹಿಕ ಶನಿಶಾಂತಿ”
ಮಧ್ಯಾಹ್ನ 12:30ಕ್ಕೆ “ದರ್ಶನ ಸೇವೆ”
1 ಗಂಟೆಗೆ ಮಹಾ ಪೂಜೆ, ಮಂಗಳಾರತಿ,ಪ್ರಸಾದ ವಿತರಣೆ ಬಳಿಕ ಸಾರ್ವಜನಿಕ *ಮಹಾ ಅನ್ನಸಂತರ್ಪಣೆ* ಕಾರ್ಯಕ್ರಮ ನಡೆಯಲಿರುವುದು.
ಸಂಜೆ 5 ಗಂಟೆಗೆ
ಪಂಚವರ್ಣ ಮಹಿಳಾ ಭಜನಾ ಮಂಡಳಿ ಕೋಟ ಇವರಿಂದ
ಭಜನಾ ಕಾರ್ಯಕ್ರಮ. 6 ಗಂಟೆಗೆ
“ವಿಶೇಷ ರಂಗ ಪೂಜೆ”.
7 ಗಂಟೆಯಿಂದ
“ತುಳಸಿಪೂಜೆ” ಹಾಗೂ “ದರ್ಶನ ಸೇವೆ” ಹಾಗೂ ರಾತ್ರಿ 8 ಗಂಟೆಯಿಂದ *ಕಾರ್ತಿಕ ದೀಪೋತ್ಸವ*
ಕಾರ್ಯಕ್ರಮ ಜರುಗಲಿರುವುದೆಂದು ಶನೀಶ್ವರ ದೇವಸ್ಥಾನದ ಪಾತ್ರಿಗಳಾದ ಭಾಸ್ಕರ್ ಸ್ವಾಮಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.