ಬೈಂದೂರು: ತ್ರಾಸಿ – ಗಂಗೊಳ್ಳಿ ರಸ್ತೆಯ ಗುಂಡಿ ಮುಚ್ಚುವ ತರಾತುರಿ ಕಳಪೆ ಕಾಮಗಾರಿಗೆ : ಸ್ಥಳೀಯರ ಆಕ್ರೋಶ.
ಬೈಂದೂರು:: ಉಡುಪಿ ಜಿಲ್ಲೆ ಬೈಂದೂರು ವಿಧಾನಸಭಾ ಕ್ಷೇತ್ರದ ಕುಂದಾಪುರ ತಾಲೂಕಿನ ತ್ರಾಸಿ- ಗಂಗೊಳ್ಳಿ ರಸ್ತೆ ಈ ವರ್ಷದ ಮಳೆಗಾಲದ ಮಳೆಯಿಂದ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಬಹಳ ದಿನದಿಂದ ರಸ್ತೆಯ ಗುಂಡಿಗಳನ್ನು ಮುಚ್ಚಲು ಲೋಕೋಪಯೋಗಿ ಇಲಾಖೆಗೆ ಹಾಗೂ ಕ್ಷೇತ್ರದ ಶಾಸಕರಿಗೆ ಮನವಿ ಮಾಡಿಕೊಂಡಿದ್ದರು.
ಸದ್ಯ ಈ ಗುಂಡಿ ಮುಚ್ಚುವ ಕಾರ್ಯ ಆರಂಭಿಸಿದ ಲೋಕೋಪಯೋಗಿ ಇಲಾಖೆ ಕೇವಲ ತೋರಿಕೆಯ ಕೆಲಸ ಮಾಡುತ್ತಿದೆ ಎಂದು ಸಾರ್ವಜನಿಕರು ದೂರಿದರು.
ಮೂರು ಕಿಲೋಮೀಟರ್ ಗುಂಡಿ ಮುಚ್ಚುವ ಕಾಮಗಾರಿ ಅವೈಜ್ಞಾನಿಕ ಕಾಮಗಾರಿ ರಸ್ತೆ ಗುಂಡಿಗೆ ಡಾಂಬರ್ ಮಿಶ್ರ ಜಲ್ಲಿ ಎರಚುವ ಮೂಲಕ ಕೇವಲ ಒಂದು ದಿನದಲ್ಲಿ ಕಾಮಗಾರಿ ಮುಗಿಸುವ ಆತುರ ಕಾಣುತಿತ್ತು.
ಇಂತಹ ಕಳಪೆ ಕಾಮಗಾರಿ ಅರಿತ ಸ್ಥಳೀಯ ಯುವಕರು,
ಹಾಗೂ ಸಾಮಾಜಿಕ ಕಾರ್ಯಕರ್ತ ಮಂಜುನಾಥ್ ಮಾವಿನಕಟ್ಟೆ ಯವರು ಈ ತರಾತುರಿ ಕೆಲಸ ಕಂಡು ಕೆಲಸ ನಿಲ್ಲಿಸುವಂತೆ ಆಗ್ರಹಿಸಿದರು.
ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಮೊಬೈಲ್ ಕರೆ ಮಾಡಿ ಮಾತನಾಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡು ಗುಣಮಟ್ಟವಿಲ್ಲದ ಡಾಂಬರ್ ಬಳಸಿ ಜಲ್ಲಿ ಗುಂಡಿಗೆ ಹಾಕಿದ್ದು ಹಾಕಿದ ಕೆಲ ಗಂಟೆಯಲ್ಲೇ ಗುಂಡಿಯಿಂದ ಜಲ್ಲಿ ಕಲ್ಲು ಹೊರ ಬರುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಮೂರು ನಾಲ್ಕು ದಿನಗಳ ಹಿಂದೆ ಈ ರಸ್ತೆಯ ದುರಸ್ತಿಯ ಬಗ್ಗೆ ಮಾದ್ಯಮದಲ್ಲಿ ವರದಿ ಬಿತ್ತರಿಸಿತು ಅಲ್ಲಿನ ಸಾರ್ವಜನಿಕರು ತಕ್ಷಣ ಅವಜ್ಞಾನಿಕ ಕಾಮಗಾರಿಯ ಬಗ್ಗೆ ಮಾಧ್ಯಮ ವರದಿಗಾರರ ಗಮನಕ್ಕೆ ತಂದರು.
ಗುಂಡಿ ಮುಚ್ಚಿರುವ ಜಲ್ಲಿ ಕಲ್ಲುಗಳನ್ನು ತಮ್ಮ ಕಾಲಿನಿಂದ ಬಗ್ಗೆದು ತೆಗೆದ ಗಿಲ್ಲಿಕಲ್ಲುಗಳನ್ನು ಸ್ಥಳೀಯ ಗುಜ್ಜಾಡಿ ಗ್ರಾಮ ಪಂಚಾಯಿತಿಗೆ ತೆಗೆದುಕೊಂಡು ಬಂದು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ಕೈಗೆ ನೀಡಿ
ಕೂಡಲೇ ಕಳಪೆ ಕೆಲಸ ನಿಲ್ಲಿಸಿ ಗುಣಮಟ್ಟ ಕೆಲಸ ಮಾಡಲು ಒತ್ತಾಯಿಸಿದರು.