ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವೈಫಲ್ಯ;
ಸರಕಾರ ಉನ್ನತ ಮಟ್ಟದ ಸಮಿತಿ ರಚಿಸಲು ರವೀಂದ್ರ ನಾಯ್ಕ ಅಗ್ರಹ.
ಜೊಯಿಡಾ: ಅರಣ್ಯ ಹಕ್ಕು ಕಾಯಿದೆ ಜಾರಿಗೆ ಬಂದು ಒಂದುವರೆ ದಶಕ ಕಳೆದರೂ ಅನುಷ್ಟಾನದಲ್ಲಿನ ವೈಫಲ್ಯದ ಕುರಿತು ಸರಕಾರ ಉನ್ನತ ಮಟ್ಟದ ಸಮಿತಿ ರಚಿಸಿ ಅನುಷ್ಟಾನದ ನ್ಯೂನತೆಯನ್ನ ಸರಿದೂಗಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆದ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಅವರು ಇಂದು ಜೋಯಿಡಾ ತಾಲೂಕಿನ ಕುಣಬಿ ಭವನದಲ್ಲಿ ಜರುಗಿದ ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಸರಕಾರ ಮತ್ತು ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಅರಣ್ಯ ಹಕ್ಕು ಕಾಯಿದೆ ಅನುಷ್ಟಾನದಲ್ಲಿ ವೈಫಲ್ಯಕ್ಕೆ ಕಾರಣವಾಗಿದೆ, ಕರ್ನಾಟಕ ರಾಜ್ಯದಲ್ಲಿ ಅರಣ್ಯ ಹಕ್ಕು ಕಾಯಿದೆ ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿವಿಧಾನ ಅನುಸರಿಸದೇ ಹಾಗೂ ನಿರ್ದಿಷ್ಟ ದಾಖಲೆಗಳನ್ನ ಒತ್ತಾಯಿಸುವಿಕೆಯಿಂದ ಅರ್ಜಿಗಳು ತೀರಸ್ಕಾರವಾಗುತ್ತಿರುವುದು ವಿಷಾದಕರ. ಹೇಚ್ಚಿನ ಕಾನೂನಾತ್ಮಕ ಅಂಶಗಳ ಕುರಿತು ಅರಣ್ಯವಾಸಿಗಳ ಪರವಾಗಿ ರಾಜ್ಯ ಸರಕಾರವು ತೀರ್ಮಾನ ತೆಗೆದುಕೊಳ್ಳುವುದು ಅತೀ ಅವಶ್ಯವೆಂದು ರವೀಂದ್ರ ನಾಯ್ಕ ಹೇಳಿದರು.
ಅರಣ್ಯ ಇಲಾಖೆಗೆ ಎಚ್ಚರಿಕೆ:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳು ಅರ್ಜಿ ಸಲ್ಲಿಸಿ ಅರ್ಜಿ ಮಂಜೂರಿ ಪ್ರಕ್ರೀಯೇ ಜರಗುತ್ತಿರುವ ಸಂದರ್ಭದಲ್ಲಿ ಅರಣ್ಯವಾಸಿಗಳ ಮೇಲೆ ಅರಣ್ಯ ಸಿಬ್ಬಂದಿಗಳಿAದ ದೌರ್ಜನ್ಯ, ಕಿರುಕುಳ, ಮಾನಸಿಕ ಹಿಂಸೆ ನಿರಂತರವಾಗಿ ಜರಗುತ್ತಿರುವುದು ಖಂಡನಾರ್ಹ. ಅರಣ್ಯ ಸಿಬ್ಬಂದಿಗಳು ಇಂತಹ ಕೃತ್ಯ ಮುಂದುವರೆಸಿದ್ದಲ್ಲಿ ಅರಣ್ಯ ಇಲಾಖೆಗೆ ಮುತ್ತಿಗೆ ಹಾಕಲಾಗುವುದೆಂದು ರವೀಂದ್ರ ನಾಯ್ಕ ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಹೋರಾಟಗಾರರಾದ ಸುಭಾಷ್ ಗಾವಡಾ ಮಾತನಾಡುತ್ತಾ ಡಿ ೧೭ ರಂದು ಶಿರಸಿಯಲ್ಲಿ ಜರಗುವ ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿಗೆ ಸಹಸ್ರಾರು ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣದಾರರು ಭಾಗವಹಿಸುತ್ತೇವೆ, ಹೋರಾಟದಿಂದ ಮಾತ್ರ ಅರಣ್ಯ ಹಕ್ಕು ಪಡೆಯಲು ಸಾಧ್ಯ, ಸಂಘಟನಾತ್ಮಕವಾಗಿ ಹೋರಾಟವನ್ನು ಮುಂದುವರೆಸುತ್ತಾ, ಅರಣ್ಯ ಸಿಬ್ಬಂದಿಗಳ ದೌರ್ಜನ್ಯವನ್ನು ನಿಯಂತ್ರಿಸುವ ಎಂದು ಹೇಳಿದರು. ಸಭೆಯಲ್ಲಿ ಬುಧ ಕಾಲಿಕರ, ಪ್ರಭಾಕರ ವೇಳಿಪ್, ಮಾಬ್ಲು ಕುಂಡಲಕರ್, ಶರಣಪ್ಪ ಗದ್ದಿ, ಅರುಣ್ ಅವೇಡಾ ಗ್ರಾಂ ಪಂಚಾಯತ ಸದಸ್ಯರು, ಸ್ವಾಮಿ ಉಳವಿ, ಸಂತೋಷ ಗಾವಡಾ, ಶಾಮಾ ಪ್ರಧಾನಿ ಮುಂತಾದವರು ಉಪಸ್ಥಿತರಿದ್ದರು.