ನಿಶ್ಚಿತ ಪಿಂಚಣಿ ಯೋಜನೆ ಮರುಜಾರಿಗೆ ಆಗ್ರಹಿಸಿ
ಕರ್ನಾಟಕ ರಾಜ್ಯ ಎನ್.ಪಿ.ಎಸ್ ಸರ್ಕಾರಿ ನೌಕರ ಸಂಘದ ಭಟ್ಕಳ ಘಟಕದಿಂದ ಶಾಸಕ ಸುನಿಲ್ ನಾಯ್ಕ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ
ಭಟ್ಕಳ – ರಾಜ್ಯ ಸರ್ಕಾರವು 1-6-2006 ರಿಂದ ಸರ್ಕಾರಿ ಸೇವೆಗೆ ಸೇರಿರುವ ನೌಕರರಿಗೆ ಜಾರಿಗೋಳಿಸಿರುವ ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದು ಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಡಿಸೆಂಬರ 19ರಿಂದ ಆರಂಭವಾಗುವ ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಜಾರಿಗೊಳಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್ ನೌಕರ ಸಂಘದ ಭಟ್ಕಳ ಘಟಕವು ಶಾಸಕ ಸುನಿಲ್ ನಾಯ್ಕರಿಗೆ ಮನವಿ ಪತ್ರವನ್ನು ನೀಡಿದರು.
ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಶಾಸಕರು ಕಳೆದ 3 – 4 ದಿನಗಳ ಹಿಂದೆ ಈ ಬಗ್ಗೆ ಗಮನಕ್ಕೆ ತಂದಾಗ ಹಳೆಯ ಪಿಂಚಣಿ ಯೋಜನೆಯ ಬಗ್ಗೆ ಇಂಧನ ಸಚಿವ ಸುನಿಲ ಕುಮಾರ ಅವರಲ್ಲಿ ಚರ್ಚಿಸಿದ್ದು ಈ ಬಗ್ಗೆ ರಾಜ್ಯದ ಹಲವೆಡೆ ಬೇಡಿಕೆ ಇದ್ದು ಈ ಬಗ್ಗೆ ಚಳಿಗಾಲದ ಅಧಿವೇ಼ಶನದಲ್ಲಿ ಚರ್ಚಿಸುವ ಭರವಸೆಯನ್ನು ನೀಡಿದ್ದು ಈ ಬಗ್ಗೆ ನಾಳೆ ಬೆಂಗಳುರಿಗೆ ತೆರಳುವವರಿದ್ದು ಈ ಸಂಭಂದ ಮುಖ್ಯಮಂತ್ರಿಗಳಲ್ಲಿ ಹಾಗೂ ಸಚಿವ ಆರ್ ಅಶೊಕ ಬಳಿ ಚರ್ಚಿಸಿ ಇಲ್ಲಿನ ಸಂಪೂರ್ಣ ವಿವರಗಳನ್ನು ಅವರಿಗೆ ಒದಗಿಸಿ ಸರ್ಕಾರದ ಚಳಿಗಾಲದ ಅಧಿವೇ಼ನದಲ್ಲಿ ಈ ಬಗ್ಗೆ ವಿಷಯವನ್ನು ಪ್ರಸ್ತಾಪಿಸುವುದಾಗಿ ಈ ಅಧಿವೇಷನದ ಅವಧಿಯಲ್ಲಿ ಅಧಿಕಾರಿ ವರ್ಗದವರ ಬೇಡಿಕೆಯನ್ನು ನೆರವೇರಿವ ಬಗ್ಗೆ ಭರವಸೆಯನ್ನು ನೀಡಿದರು.
ಈ ಸಂಧರ್ಭದಲ್ಲಿ ಬೇಡಿಕೆಗೆ ಆಗ್ರಹಿಸಿ ತಾಲೂಕಾ ಆಡಳಿತ ಸೌಧದ ಎದುರಿನಲ್ಲಿ ಅಧಿಕಾರಿ ವರ್ಗದವರು ಸಾಂಕೆತಿಕವಾಗಿ ಪ್ರತುಭಟಿಸಿದರು ಈ ಸಂಧರ್ಭದಲ್ಲಿ ಭಟ್ಕಳ ತಹಶಿಲ್ದಾರ ಸುಮಂತ ಬಿಇ, ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಮಂಜುನಾಥ ಎನ್, ಎನ್.ಪಿ.ಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗಣೇಶ ಹೆಗಡೆ, ತಾಲೂಕಾಧ್ಯಕ್ಷ ಶೆಖರ ಪೂಜಾರಿ, ಖಜಾಂಚಿ ಗುಡ್ಡಪ್ಪ ಸೇರಿದಂತೆ ಹಲವಾರು ಸರ್ಕಾರಿ ನೌಕರರು ಉಪಸ್ಥಿತರಿದ್ದರು.