ರಂಜನ್ ಇಂಡೆನ್ ಗ್ಯಾಸ್ ಏಜೆನ್ಸಿ ಭಟ್ಕಳ ಇವರ ನೇತೃತ್ವದಲ್ಲಿ ಫೆ. 18 ರಂದು ಮಹಾಶಿವರಾತ್ರಿಯ ಪ್ರಯುಕ್ತ ಮುರುಡೇಶ್ವರ ದೇವಸ್ಥಾನಕ್ಕೆ 13 ನೆ ವರ್ಷದ ಪಾದಯಾತ್ರೆ ಆಯೋಜನೆ
ಭಟ್ಕಳ- ರಂಜನ್ ಇಂಡೆನ್ ಗ್ಯಾಸ್ ಏಜೆನ್ಸಿ ಭಟ್ಕಳ ಇವರ ನೇತೃತ್ವದಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ 13 ನೆ ವರ್ಷದ ಮುರುಡೇಶ್ವರ ದೇವಸ್ಥಾನ ಕ್ಕೆ ಪಾದಾಯಾತ್ರೆಯು ದಿನಾಂಕ 18-2-2023 ರ ಬೆಳ್ಳಿಗೆ 4.05 ನಿಮಿಷಕ್ಕೆ ಭಟ್ಕಳ ಚೋಳೆಶ್ವರ ದೇವಸ್ಥಾನ ಆರಂಭಗೊಳ್ಳಲಿದೆ ,ಪಾದಯಾತ್ರೆಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಾಲ್ಗೊಂಡು ಶ್ರೀ ಮುರುಡೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕೆಂದು ರಂಜನ್ ಇಂಡೆನ್ ಏಜೆನ್ಸಿ ಮಾಲಕರಾದ ಶ್ರೀಮತಿ ಶಿವಾನಿ ಶಾಂತರಾಮ್ ಅವರು ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಾದಾಯಾತ್ರೆಯಲ್ಲಿ ಪಾಲ್ಗೊಂಡು ಮುರುಡೇಶ್ವರದಿಂದ ವಾಪಸ್ಸು ಬರಲು ಭಕ್ತಾದಿಗಳ ಅನುಕೂಲಕ್ಕಾಗಿ 25 ಸರಕಾರಿ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳುಸಿದರು. ಸರಕಾರಿ ಆಸ್ಪತ್ರೆ ಸಹಾಯದೊಂದಿಗೆ ಆಂಬುಲೆನ್ಸ್ ಮತ್ತು ಪ್ರಥಮ ಚಕಿಸ್ತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಇದೆ ಮೊದಲ ಬಾರಿಗೆ 2 ಮೊಬೈಲ್ ಶೌಚಾಲಯ ಮಹಿಳಾ ಭಕ್ತಾದಿಗಳ ಅನುಕೂಲಕ್ಕಾಗಿ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.ಭಟ್ಕಳದ ಸಮಸ್ತ ನಾಗರಿಕರು , ಸಂಘಟನೆಗಳು ಪ್ರತಿವರ್ಷದಂತೆ ಈ ವರ್ಷ ಕೂಡ ಸಹಾಯ ಸಹಕಾರ ನೀಡುವುದರ ಜೊತೆಗ ಪಾದಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವೀಗಿಸಬೇಕಾಗಿ
ವಿನಂತಿಸಿಕೊಂಡಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಕುಮಾರ ನಾಯ್ಕ, ಮಾಸ್ತಿ ಮೊಗೇರ, ಕಿರಣ್ ಮುಂತಾದವರು ಉಪಸ್ಥಿತರಿದ್ದರು.