ಭಟ್ಕಳ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಅಧಿಕೃತ ಎಂ.ಎಲ್.ಎ ಅಭ್ಯರ್ಥಿಯಾಗಿ ಸಮಾಜ ಸೇವಕ ಡಾಕ್ಟರ್ ನಸೀಮ್ ಖಾನ್ ಘೋಷಣೆ
ಭಟ್ಕಳ: ಭಟ್ಕಳ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಆಮ್ ಆದ್ಮಿ ಪಾರ್ಟಿ ಎಂ.ಎಲ್.ಎ ಅಭ್ಯರ್ಥಿಯಾಗಿ ಶಿರಾಲಿಯ ಸಮಾಜ ಸೇವಕ , ವೈದ್ಯ, ಡಾಕ್ಟರ್ ನಸೀಮ್ ಖಾನ್ ಅವರನ್ನು ಆಯ್ಕೆ ಮಾಡಿ ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷರಾದ ಪಥ್ವಿ ರೇಡ್ಡಿ ಅವರು ಘೋಷಣೆ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಭಟ್ಕಳ ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಬ್ಯಾರಿ ಅವರು ಕನ್ನಡ ಟುಡೇ ನ್ಯೂಸ್ ಗೆ ಪ ತಿಳಿಸಿದ್ದಾರೆ.
ಡಾಕ್ಟರ್ ನಸೀಮ್ ಖಾನ್ ಅವರು ಕಳೆದ 2 ತಿಂಗಳುಗಳಿಂದ ಭಟ್ಕಳ- ಹೊನ್ನವಾರ ವಿಧಾನಸಭಾ ಕ್ಷೇತ್ರದಲ್ಲಿ ಧಾನ, ಧರ್ಮಗಳನ್ನು ಮಾಡುತ್ತ, ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತ ಕಾಲಿಗೆ ಚಕ್ರ ಕಟ್ಟಿಕೊಂಡು ಪಕ್ಷ ಸಂಘಟನೆಯಲ್ಲಿ ತೂಡಗಿಕೊಂಡಿದ್ದರು. ಇವರು ಕೋವಿಡ ಸಮಯದಲ್ಲಿ ಸಾವಿರಾರು ಬಡ ರೋಗಿಗಳಿಗೆ ತಮ್ಮ ಜೀವದ ಹಂಗು ತೊರೆದು ಉಚಿತ ಚಿಕಿಸ್ತೆ ನೀಡಿದರು. ಬಡವರಿಗೆ ಸಾವಿರಾರು ಆಹಾರದ ಕಿಟ್ಗಳನ್ನು ತಮ್ಮ ಸ್ವಂತ ಕರ್ಚಿನಿಂದ ನೀಡಿದ್ದರು.