ಭಟ್ಕಳದ ಮುಟ್ಟಳ್ಳಿ ಗ್ರಾಮ ಪಂಚಾಯತ ಕಾಂಗ್ರೆಸ್ ಮಡಿಲಿಗೆ,
ಅಧ್ಯಕ್ಷರಾಗಿ ರಜನಿ ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಲಕ್ಷ್ಮಿ ಗೊಂಡ ಆಯ್ಕೆ
*ಭಟ್ಕಳ-ಸಚಿವ ಮಂಕಾಳ್ ವೈದ್ಯರವರ ಬೆಂಬಲ ಹಾಗೂ ಮುಟ್ಟಳ್ಳಿ ಪಂಚಾಯತ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರುಗಳ ಸಂಘಟಿತ ಪ್ರಯತ್ನದಿಂದ ಮುಟ್ಟಳ್ಳಿ ಪಂಚಾಯತ ಆಡಳಿತವು ಕಾಂಗ್ರೆಸ್ ಅಭ್ಯರ್ಥಿಗಳ ಪಾಲಾಗಿದೆ. ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶ್ರೀಮತಿ *ರಜನಿ ವೆಂಕಟ್ರಮಣ ನಾಯ್ಕ* ರವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಲಕ್ಷ್ಮೀ ನಾರಾಯಣ ನಾಯ್ಕರವರನ್ನ *7-6* ಮತಗಳ ಅಂತರದಿಂದ ಸೋಲಿಸಿ ಅಧ್ಯಕ್ಷರಾಗಿ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಶ್ರೀಮತಿ *ಲಕ್ಷ್ಮೀ ಗೊಂಡರ* ವರು ಅವಿರೋಧವಾಗಿ ಆಯ್ಕೆಯಾದರು. ಇಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರುಗಳಾದ ಶ್ರೀಮತಿ ರಜನಿ ನಾಯ್ಕ, ಗಣಪತಿ ನಾಯ್ಕ ತಲಾನ್, ಪಾರ್ವತಿ ಮೊಗೇರ, ಇಬ್ರಾಹಿಂ ಶೇಖ್, ಸಲೀಮ್ ಮಕಾಂದರ್, ಕೂಸ್ನುಂ ಮತ್ತು ರೋಹೀನ್ ರವರು ಪಾಲ್ಗೊಂಡಿದ್ದರು. ಮಾಜಿ ಎಪಿಎಂಸಿ ಅಧ್ಯಕ್ಷ ಗೋಪಾಲ ನಾಯ್ಕರವರು ಸಂಪೂರ್ಣ ಚುನಾವಣೆಯ ನೇತೃತ್ವವನ್ನವಹಿಸಿದ್ದು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕರವರು ಬೆಂಬಲ ವ್ಯಕ್ತಪಡಿಸಿದ್ದರು.ಜಿಲ್ಲಾ ಪಂಚಾಯಿತಿ ಇಂಜಿನಿಯರ ಬಸವರಾಜ ಬಳ್ಳಾರಿ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.