ಶಿರಸಿಯಲ್ಲಿ ಎರಡು ಬಸ್ಸುಗಳ ನಡುವೆ ಮುಖಾಮುಖಿ ಅಪಘಾತ – 10 ಜನ ಪ್ರಯಾಣಿಕರಿಗೆ ಗಂಬಿರ ಗಾಯ!
ಶಿರಸಿ: ಎರಡು ಬಸ್ಸುಗಳು ಮುಖಾಮುಖಿ ಡಿಕ್ಕಿ ಹೊಡೆದು ಹಲವು ಪ್ರಯಾಣಿಕರು ಗಾಯಗೊಂಡ ಘಟನೆ ಶಿರಸಿ ತಾಲೂಕಿನ ಇಸಳೂರು ಸಮೀಪ ಆ. 22 ರಂದು ರವಿವಾರ ಬೆಳಿಗ್ಗೆ ನಡೆದಿದೆ.
ಶಿರಸಿಯಿಂದ ಹೊರಟಿದ್ದ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಹಾಗೂ ಬೆಂಗಳೂರಿಂದ ಬರುತ್ತಿದ್ದ ಗ್ರೀನ್ ಲೈನ್ ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಎರಡೂ ಬಸ್ ನಲ್ಲಿದ್ದ 10 ಜನ ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ಶಿರಸಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.