ಬೈಕ್ ಹಾಗೂ ಕಾರು ನಡುವೆ ರಸ್ತೆ ಅಪಘಾತ- ಬೈಕ್ ಸವಾರ ಸಾವು
ಅಂಕೋಲಾ -ಬೈಕ್ ಹಾಗೂ ಕಾರು ನಡುವೆ ನಡೆದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ಬಾಳೆಗುಳಿಯ ವರದರಾಜ್ ಹೋಟೇಲ್ ಸಮೀಪ ನಡೆದಿದೆ.
ಮೃತ ಬೈಕ್ ಸವಾರ ತಾಲೂಕಿನ ಅಲಗೇರಿ ಗ್ರಾ.ಪಂ. ವ್ಯಾಪ್ತಿಯ ಕೃಷ್ಣಾಪುರದ ನಜೀರ ಹುಸನ ಶೇಖ್ (44) ಎಂದು ಗುರುತಿಸಲಾಗಿದೆ.
ಇನ್ನು ಗಾಯಗೊಂಡ ಸಹಸವಾರ ಮೃತನ ಸಹೋದರಿಯ ಮಗ ಹುಬ್ಬಳ್ಳಿಯ ಅಬ್ದುಲ ರೆಹಮಾನ ಮುರ್ಜಿ (10) ಎಂದು ತಿಳಿದುಬಂದಿದೆ.
ಬೈಕ್ ಸವಾರ ನಜೀರ ಶೇಖ್ನು ಬೊಬ್ರುವಾಡದಿಂದ ಬೈಕ್ನಲ್ಲಿ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಕುಮಟಾ ಕಡೆಯಿಂದ ಕಾರವಾರ ಕಡೆಗೆ ಸಂಚರಿಸುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ಸಂಭವಿಸಿದೆ.
ಗಾಯಗೊಂಡ ಅಬ್ದುಲ್ ಮುರ್ಜಿಯ ತಲೆಭಾಗಕ್ಕೆ ತೀವೃ ಗಾಯವಾಗಿದ್ದರಿಂದ ಕಾರವಾರ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಪಿಎಸ್ಐ ಸಂತೋಷ ಶೆಟ್ಟಿ ಅವರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಕೈಗೊಂಡಿದ್ದಾರೆ.