ಡಿ.೨೬ರ ಮಂಗಳವಾರ ದತ್ತಜಯಂತಿಯಂದು ಗದ್ದುಗೆ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವ..
ಭಟ್ಕಳ : ತಿಮ್ಮಯ್ಯ ದಾಸರಿಂದ ಸಂಸ್ಥಾಪಿಸಲ್ಪಟ್ಟಿರುವ ತಾಲೂಕಿನ ಶಕ್ತಿಸ್ಥಳವಾಗಿರುವ ಗದ್ದುಗೆ ಶ್ರೀ ಶ್ರೀಧರ ಪದ್ಮಾವತಿ ದೇವಿಯ ರಥೋತ್ಸವವು ವರ್ಷಂಪ್ರತಿಯಂತೆ ದತ್ತಜಯಂತಿಯಂದು ಇದೇ ಬರುವ ಡಿಸೆಂಬರ್ ೨೬ನೇ ತಾರೀಖಿನ ಮಂಗಳವಾರ ನಡೆಯಲಿದೆ. ದತ್ತಜಯಂತಿಯ ಅಂಗವಾಗಿ ಶ್ರೀಧರ ಸ್ವಾಮಿಗಳ ಪಾದುಕಾ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮದ್ಯಾಹ್ನ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ನಾಲ್ಕು ಗಂಟೆಗೆ ಪುರಬೀದಿಯಲ್ಲಿ ಶ್ರೀ ಶ್ರೀಧರ ಸ್ವಾಮಿಗಳ ಪಾದುಕೆ ಮತ್ತು ಶ್ರೀ ಪದ್ಮಾವತಿ ದೇವಿಯ ಉತ್ಸವ ಮೂರ್ತಿಯನ್ನೊಳಗೊಂಡ ರಥೋತ್ಸವದ ಮರವಣಿಗೆ ನಡೆಯಲಿದೆ. ರಥೋತ್ಸವದ ಮೆರವಣಿಗೆಯು ದೇವಾಲಯದಿಂದ ಹೊರಟು ರಘುನಾಥ ರಸ್ತೆಯ ಮಾರ್ಗವಾಗಿ ಪುಷ್ಪಾಂಜಲಿ ಚಿತ್ರಮಂದಿರದ ವರೆಗೆ ಕ್ರಮಿಸಿ ಹಾಗೆಯೇ ಹಿಂದಿರುಗಿ ವೀರವಿಠಲ ರಸ್ತೆಯ ಮೂಲಕ ಸಾಗಿ ನೆಹರು ರಸ್ತೆ, ಹೂವಿನ ಚೌಕ, ಮುಖ್ಯರಸ್ತೆಯ ಮೂಲಕ ಅರ್ಬನ ಬ್ಯಾಂಕ ಬಳಿ ಸಾಗಿ ಅಲ್ಲಿಂದ ಹಿಂದಿರುಗಿ ಹಳೆಬಸ್ ನಿಲ್ದಾಣ, ಕಳಿ ಹನುಮಂತ ದೇವಸ್ಥಾನದ ಮಾರ್ಗವಾಗಿ ದೇವಾಲಯವನ್ನು ತಲುಪಲಿದೆ. ಈ ಎಲ್ಲ ಕಾರ್ಯಕ್ರಮಗಳಿಗೆ ಸದ್ಭಕ್ತರು ಪಾಲ್ಗೊಂಡು ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕೆಂದು ಧರ್ಮದರ್ಶಿಗಳು ಕೋರಿದ್ದಾರೆ.