ಜ.೩೦ರಂದು ಶಿರಸಿಯಲ್ಲಿ ಸುಕೃಷಿ ಯೋಜನೆಯ ಉದ್ಘಾಟನಾ ಕಾರ್ಯಕ್ರಮ
ಶಿರಸಿ GIZ ಹಾಗೂ SCODWES ಸಂಸ್ಥೆ ಸಹಯೋಗದಲ್ಲಿ ಜನವರಿ 30 ನೇ ತಾರೀಖಿನ ಮಂಗಳವಾರ ಶಿರಸಿ ನಗರದ ಟಿ ಆರ್ ಸಿ ಬ್ಯಾಂಕ್ ನ ಸಭಾಭವನದಲ್ಲಿ ನೈಸರ್ಗಿಕ ಕೃಷಿ ಪದ್ಧತಿಯನ್ನು ಉತ್ತೇಜಿಸುವ ಉದ್ದೇಶದಿಂದ *ಸು -ಕೃಷಿ ಯೋಜನೆಯ* ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ಆಯ್ದ ರೈತ ಉತ್ಪಾದಕ ಕಂಪನಿಗಳ ರೈತರ ಜಮೀನುಗಳಲ್ಲಿ ಸುಸ್ಥಿರ ಕೃಷಿಯ ಪದ್ಧತಿಯನ್ನು ಅಳವಡಿಸಲು ಮತ್ತು ಜನರನ್ನು ನೈಸರ್ಗಿಕ ಕೃಷಿಯ ಕಡೆಗೆ ಜಾಗೃತಿಗೊಳಿಸಲು ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಸಿರ್ಸಿ- ಸಿದ್ದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ಭೀಮಣ್ಣ ನಾಯ್ಕ್ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ವಾಸುದೇವ್ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಡಾ. ಹೊನ್ನಪ್ಪ ಗೌಡ, ಉಪ ನಿರ್ದೇಕರಾದ ಟಿ ಹೆಚ್ ನಟರಾಜ್, ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥೆ ಡಾ. ರೂಪಾ ಪಾಟೀಲ್, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶ್ರೀ ಡಾ. ಬಿ ಪಿ ಸತೀಶ್, ತೋಟಗಾರಿಕೆ ಮಹಾವಿದ್ಯಾಲಯ ಶಿರಸಿಯ ಡೀನ್ ಡಾ. ವಿ ದೇವಪ್ಪ , ಶ್ರೀ ಸತೀಶ ಹೆಗಡೆ ಕಾರ್ಯ ನಿರ್ವಹಣಾಧಿಕಾರಿಗಳು ತಾಲೂಕು ಪಂಚಾಯತ್ ಶಿರಸಿ,ಡಾ. ಉಮೇಶ್ ಕೊಂಡಿ ಉಪ ನಿರ್ದೇಶಕರು ಪಶುಸಂಗೋಪನೆ ಇಲಾಖೆ ಪಾಲಿ ಕ್ಲಿನಿಕ್ ಯಲ್ಲಾಪುರ, ಶ್ರೀ ಗೋಪಲಕೃಷ್ಣ ವೈದ್ಯ ಅದ್ಯಕ್ಷರು ಟಿ ಎಸ್ ಎಸ್ ಶಿರಸಿ ಮತ್ತು ಮುಂಡಗನಮನೆ ಸೇವಾ ಸಹಕಾರಿ ಸಂಘ ನಿ ಮತ್ತಿಘಟ್ಟ, ಶ್ರೀ ರಾಮಕೃಷ್ಣ ಹೆಗಡೆ ಅದ್ಯಕ್ಷರು ಟಿ ಆರ್ ಸಿ ಬ್ಯಾಂಕ್ ಶಿರಸಿ, ಶ್ರೀ ರತಿಕಾಂತ ನಾಯಕ್ ಕೃಷಿ ಸಲಹೆಗಾರರು suATI ಯೋಜನೆ
ಇವರು ಭಾಗವಹಿಸಲಿದ್ದು, ರೈತರನ್ನು ಸುಸ್ಥಿರ ಕೃಷಿ ಯೋಜನೆಯಲ್ಲಿ ತೊಡಗಿಸುವ ನಿಟ್ಟಿನಲ್ಲಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಕೆವಿ ಕೂರ್ಸೆ,ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಆಡಳಿತ ಅಧಿಕಾರಿಗಳು ಆದ ಶ್ರೀಮತಿ ಸರಸ್ವತಿ ಏನ್ ರವಿ, ಆಡಳಿತ ಮಂಡಳಿ ಸದಸ್ಯ ಕೆಎನ್ ಹೊಸಮನಿ ಅವರು ಉಪಸ್ಥಿತರಿರಲಿದ್ದಾರೆ.
*ಕಾರ್ಯಕ್ರಮದ ಆಕರ್ಷಣೆ*. ಸಾಯಿಲ್ ಸಂಸ್ಥೆಯ ಮುಖ್ಯಸ್ಥ ಹಾಗೂ ಮಣ್ಣಿನ ತಜ್ಞ ಶ್ರೀ ಪಿ. ಶ್ರೀನಿವಾಸ್ (Soil Vasu) ರೈತರನ್ನು ಉದ್ದೇಶಿಸಿ ನಮ್ಮ ಮಣ್ಣನ್ನು ನಾವೇ ಪರೀಕ್ಷೆ ಮಾಡಿಕೊಳ್ಳುವುದು ಹೇಗೆ?, ತೋಟದ ಕಳೆಯಿಂದ ಯಾವ ರೀತಿ ಗೊಬ್ಬರ ತಯಾರಿಸಿಕೊಳ್ಳಬಹುದು ಎಂಬ ಮಾಹಿತಿ ನೀಡಲಿದ್ದು, ನೈಸರ್ಗಿಕ ಕೃಷಿ ವಿಷಯಗಳಿಗೆ ಸಂಬಂಧಿಸಿದಂತೆ ವಸ್ತು ಪ್ರದರ್ಶನವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮವು ಪ್ರಾಯೋಗಿಕ ಮಾಹಿತಿಗಳಿಂದ ಕೂಡಿರುವುದರಿಂದ ಬರುವ ರೈತರು ತಮ್ಮ ಜಮೀನಿನ ಮಣ್ಣು ಮತ್ತು ತೋಟದ ಕಳೆ ತರಲು ವಿನಂತಿಸಲಾಗಿದೆ .10 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ರೈತರು ಹಾಗೂ ರೈತ ಉತ್ಪಾದಕರ ಸoಸ್ತೆಗಳ ಮುಖಂಡರುಗಳು ಭಾಗವಹಿಸಿ ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ. ವೆಂಕಟೇಶ್ ನಾಯ್ಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.