ಟೂಲ್ ಕಿಟ್ ಟೆಂಡರ್ ಅನ್ನು ರದ್ದುಗೊಳಿಸಿ ಮಂಡಳಿ ಸೆಸ್ ಹಣವನ್ನು ಕಾರ್ಮಿಕರ ವಿವಿಧ ಸೌಲಭ್ಯಗಳಿಗೆ ವಿನಯೋಗಿಸಿವಂತೆ ಒತ್ತಾಯಿಸಿ ಎ.ಐ. ಟಿ.ಯು.ಸಿ ಭಟ್ಕಳ ಘಟಕದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರವರಿಗೆ ಮನವಿ
ಭಟ್ಕಳ-ಟೂಲ್ ಕಿಟ್ ಟೆಂಡರ್ ಅನ್ನು ರದ್ದುಗೊಳಿಸಿ ಮಂಡಳಿ ಸೆಸ್ ಹಣವನ್ನು ಕಾರ್ಮಿಕರ ವಿವಿಧ ಸೌಲಭ್ಯಗಳಿಗೆ ವಿನಯೋಗಿಸಿ ಎ.ಐ.ಟಿ.ಯು.ಸಿ ಕಾರ್ಮಿಕ ಸಂಘಟನೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರ ವರಿಗೆ ಭಟ್ಕಳ ಸಹಾಯಕ ಆಯುಕ್ತರ ಮೂಲಕ ಮನವಿ ಸಲ್ಲಿಸಿದರು.
ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರಿಗೆ ವೃತ್ತಿಪರ ಟೂಲ್ ಕಿಟ್ಟಾದ ಮೇಸನ್ ಕಿಟ್. ವೆಲ್ಡಿಂಗ್ ಕಿಟ್. ಟೈಲ್ಸ್ ಲೇಯರ್ ಕಿಟ್. ಎಲೆಕ್ಟ್ರಿಷಿಯನ್ ಕಿಟ್. ರಸ್ತೆ ಕಾಮಗಾರಿ ಕಿಟ್. ಪ್ಲಂಬಿಂಗ್ ಕಿಟ್.
ಮುಂತಾದ ಕಿಟ್ಟುಗಳನ್ನು ವಿತರಿಸಲು ಟೆಂಡರ್ ಅನ್ನು ಕರೆಯಲಾಗಿದೆ. ರಾಜ್ಯ ಸರ್ಕಾರ. ಕಾರ್ಮಿಕ ಇಲಾಖೆ ಹಾಗೂ ಕಲ್ಯಾಣ ಮಂಡಳಿ ಯಾವುದೇ ದೂರ ದೃಷ್ಟಿ ಇಲ್ಲದೆ ಕಲ್ಯಾಣ ಮಂಡಳಿಯ ಸೆಸ್ ಹಣವನ್ನು ದುರುಪಯೋಗ ಮಾಡುತ್ತಿದ್ದಾರೆ. ಈ ತರಹ ಕಿಟ್ ವಿತರಣೆಯಿಂದ ಯಾವುದೇ ರೀತಿಯ ಪ್ರಯೋಜನ ಇರುವುದಿಲ್ಲ. ಉಚಿತ ಕಿಟ್ ನೀಡುವ ವ್ಯವಸ್ಥೆಯಲ್ಲಿ ಕಲ್ಯಾಣ ಮಂಡಳಿಯಲ್ಲಿ ಇದ್ದಂತಹ ಕಟ್ಟಡ ಕಾರ್ಮಿಕರ ಸಾವಿರಾರು ಕೋಟಿ ಸೆಸ್ ಹಣ ದುರುಪಯೋಗ ಆಗುವ ಸಾಧ್ಯತೆ ಇದೆ. 49.73 ಕೋಟಿ ವೆಚ್ಚದಲ್ಲಿ 7,000 ಲ್ಯಾಪ್ಟಾಪ್ ಖರೀದಿಗೆ ಮಂಡಳಿಯ ಸೆಸ್ ಬಳಸಲಾಗಿದೆ. ಇದರಲ್ಲಿಯೂ ಕೂಡ ಕೋಟ್ಯಾಂತರ ರೂಪಾಯಿ ದುಂಧು ವೆಚ್ಚವಾಗಿದೆ. ಕಟ್ಟಡ ಕಾರ್ಮಿಕರ ಸೆಸ್ ನಿಧಿಯು ಕಾರ್ಮಿಕರ ಮದುವೆ. ವೈದ್ಯಕೀಯ. ಪಿಂಚಣಿ .ಕಾರ್ಮಿಕರ ಮಕ್ಕಳ ಶೈಕ್ಷಣಿಕ. ಹೆರಿಗೆ ಧನ ಸಹಾಯ. ಮುಂತಾದ 19ಕ್ಕೂ ಅಧಿಕ ಸೌಲಭ್ಯಗಳಿಗೆ ಉಪಯೋಗ ಆಗಬೇಕು. ಅದರಂತೆ 2021- 22 ಮತ್ತು 2022-23 ನೇ ಸಾಲಿನ ಶೈಕ್ಷಣಿಕ ಧನಸಾಯವು ಶೇಕಡ 80/ರಷ್ಟು ಕಡಿತ ಮಾಡಲಾಗಿದೆ. ಇದರಿಂದ ಕಟ್ಟಡ ಕಾರ್ಮಿಕರ ಮಕ್ಕಳು ತಮ್ಮ ವಿದ್ಯಾಭ್ಯಾಸವನ್ನು ಕುಂಠಿತಗೊಳಿಸಿ ಕೂಲಿ ಕೆಲಸಕ್ಕೆ ತೆರಳುವ ಸಮಸ್ಯೆ ಎದುರಾಗಿದೆ. ಕಾರ್ಮಿಕರ ಮಕ್ಕಳು ವಿದ್ಯಾ ವಂಚಿತರಾಗಿ ಬೇರೆ ಬೇರೆ ಊರಲ್ಲಿ ಕೂಲಿ ಕೆಲಸಕ್ಕೆ ವಲಸೆ ಹೋಗಿದ್ದಾರೆ. ಇವೆಲ್ಲವೂ ಉಚಿತ ಕಿಟ್ ನೀಡುವ ವ್ಯವಸ್ಥೆಯಲ್ಲಿ ಕಲ್ಯಾಣ ಮಂಡಳಿಯ ನಿಧಿಯ ಸಮತೋಲನವನ್ನು ಕಾಪಾಡದೇ ಸಮಸ್ಯೆ ಎದುರಾಗಿದೆ. ಉಚಿತ ಕಿಟ್ ನೀಡುವ ವಿಷಯದಲ್ಲಿ ಸನ್ಮಾನ್ಯ ಕಾರ್ಮಿಕ ಮಂತ್ರಿಗಳು ದಿನಾಂಕ 20-08- 2023 ರಂದು ಸಭೆ ಕರೆದಾಗ ನಮ್ಮ ಸರ್ಕಾರ ಯಾವುದೇ ವಸ್ತು ರೂಪದಲ್ಲಿ ಈ ಹಿಂದೆ ನೀಡುತ್ತಿದ್ದ ಎಲ್ಲವನ್ನು ನಿಲ್ಲಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಿದರು. ಆದರೆ ಈಗ ಪುನಃ ಅದೇ ರೀತಿ ಮುಂದುವರಿಸಿದ್ದಾರೆ. ಇನ್ನು ಇದೇ ರೀತಿ ಮುಂದೆವರಿದರೆ ರಾಜ್ಯದ ಕಟ್ಟಡ ಕಾರ್ಮಿಕರು ಮತ್ತು ಅವರ ಕುಟುಂಬ ಕಲ್ಯಾಣ ಮಂಡಳಿಯ ಸೌಲಭ್ಯ ವಂಚಿತರಾಗಿ ಬೀದಿ ಪಾಲಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಈ ಕೂಡಲೇಉಚಿತ ಟೂಲ್ ಕಿಟ್ ಟೆಂಡರನ್ನು ರದ್ದುಪಡಿಸಿ ಬಾಕಿ ಇರುವ ಶೈಕ್ಷಣಿಕ ಅರ್ಜಿಗಳಿಗೆ 2021-22 ನೇ ಸಾಲಿನ ಶೈಕ್ಷಣಿಕ ಧನ ಸಹಾಯದ ಮಂಜೂರಾತಿ ಆದೇಶದಲ್ಲಿ ಇದ್ದಂತೆ ಧನ ಸಹಾಯವನ್ನು ಫಲಾನುಭವಿ ಖಾತೆಗೆ ಕೂಡಲೇ ಜಮಾ ಮಾಡಬೇಕು. ಮತ್ತು 2023- 24 ನೇ ಸಾಲಿನ ಶೈಕ್ಷಣಿಕ ಅರ್ಜಿ ಸ್ವೀಕೃತಿಯನ್ನು ಅತಿ ಶೀಘ್ರದಲ್ಲೇ ಪ್ರಾರಂಭಿಸಬೇಕು ಎಂದು ಈ ಮೂಲಕ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ರವರಿಗೆ. ಮಾನ್ಯ ಸಹಾಯಕ ಆಯುಕ್ತರು ಭಟ್ಕಳ ಇವರ ಮುಖಾಂತರ ಮನವಿ ಸಲ್ಲಿಸಲಾಗಿದೆ ಎಂದು ಪತ್ರಿಕ ಪ್ರಕಟಣೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಜಿ.ಎನ್. ರೇವಣಕರ್. ತಿಳಿಸಿರುತ್ತಾರೆ. ಈ ಸಂಧರ್ಭದಲ್ಲಿ ಸುರೇಶ್ ನಾಗಪ್ಪ ಆಚಾರಿ. ಸತೀಶ್ ವಾಸು ಮಡಿವಾಳ. ಫಯಾಜ್ .ಸಿ. ಹುಸೇನ್. ಜಟ್ಟಿ ಸಣ್ಣಪು ದೇವಡಿಗ. ರಂಜನಾ ಗೋವಿಂದ ಮೊಗೇರ. ಉಪಸ್ಥಿತರಿದ್ದರು.