ನಾಡಿನ ನಾಮಾಂಕಿತ ಹಿರಿಯ ಸಾಹಿತಿ, ಪತ್ರಕರ್ತ, ವಿಮರ್ಶಕ, ಕಲಾವಿದ,ವಿಷ್ಣು ನಾಯ್ಕ ನಿಧನಕ್ಕೆ ಆರಣ್ಯ ಭೂಮಿ ಹಕ್ಕು ಹೋರಾಟ ಗಾರರ ವೇದಿಕೆ ತೀವ್ರ ಸಂತಾಪ:
ಅAಕೋಲಾ: ನಾಡಿನ ನಾಮಾಂಕಿತ ಹಿರಿಯ ಸಾಹಿತಿ, ಪತ್ರಕರ್ತ, ವಿಮರ್ಶಕ, ಕಲಾವಿದ, ವಿಷ್ಣು ನಾಯ್ಕ ಅವರ ನಿಧನಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.
ತಮ್ಮ ಬರವಣಿಗೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು ಇಂದಿನ ಸಾಮಾಜಿಕ ಮಾರ್ಗದರ್ಶಕರಾಗಿದ್ದು, ಅವರ ಬರವಣಿಗೆ ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶಕವಾಗಿದೆ ಎಂದು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರ ಕುಟುಂಬಕ್ಕೆ ದುಃಖ ಬರಿಸುವ ಶಕ್ತಿ ದೇವರು ನೀಡಲಿ ಎಂದು ಅವರು ತಿಳಿಸಿದ್ದಾರೆ.