ಜಿಲ್ಲೆಯಲ್ಲಿ ಸಚಿವ ಮಂಕಾಳ್ ವೈದ್ಯ ಪೊಲೀಸ ಇಲಾಖೆಯನ್ನು ತಮಗೆ ಬೇಕಾದ ಹಾಗೆ ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರ ಮೇಲೆ ಕೇಸ ದಾಖಲು ಮಾಡುತ್ತಿದ್ದಾರೆ- ಮಾಜಿ ಶಾಸಕ ಸುನೀಲ್ ನಾಯ್ಕ ಆರೋಪ
ಭಟ್ಕಳ-ಭಟ್ಕಳದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಕ್ರಿಯ ಸದಸ್ಯ ಹಾಗೂ ಹಿಂದೂ ಸಂಘಟನೆಯಲ್ಲಿ ಕ್ರಿಯಾಶೀಲರಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ಹಿಂದೂ ಸಮಾಜಕ್ಕೆ ಅನ್ಯಾಯವಾದಾಗ ತಮ್ಮ ಅಮೂಲ್ಯ ಸಮಯ ನೀಡುತ್ತಾ ಬಂದಿರುವ ಭಟ್ಕಳದ ಶ್ರೀನಿವಾಸ ನಾಯ್ಕ, ಹನುಮಾನ್ ನಗರ ಇವರ ಮೇಲೆ ಗಡಿಪಾರು ಕೇಸು ದಾಖಲಾಗಿಸಲಾಗಿದೆ.
ಜಿಲ್ಲೆಯಲ್ಲಿ ಸಚಿವ ಮಂಕಾಳ್ ವೈದ್ಯರು ಇಲಾಖೆಯನ್ನು ತಮಗೆ ಬೇಕಾದ ಹಾಗೆ ದುರ್ಬಳಕೆ ಮಾಡಿಕೊಂಡು ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಸಿ ಆಡಳಿತ ನಡೆಸುತ್ತಿರುವಂತೆ ಕಾಣುತ್ತಿದೆ.
ಭಟ್ಕಳದಲ್ಲಿ ಹಲವಾರು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಅದೆಷ್ಟೋ ಕಾಂಗ್ರೆಸ್ ಕಾರ್ಯಕರ್ತರೂ ಕೂಡ ಇದ್ದಾರೆ, ಅವೆಲ್ಲವನ್ನೂ ಬಿಟ್ಟು ಹಿಂದೂ ಬಿಜೆಪಿ ಕಾರ್ಯಕರ್ತರನ್ನೆ ಗುರಿಯಾಗಿಸುತ್ತಿರುವುದನ್ನು ಖಂಡಿಸುತ್ತಿರುವುದ್ದಾಗಿ ಭಟ್ಕಳದ ಮಾಜಿ ಶಾಸಕ ಸುನಿಲ್ ನಾಯ್ಕ್ ತಿಳಿಸಿದ್ದಾರೆ. ಬುದುವಾರ ಭಟ್ಕಳ ಬಿಜೆಪಿಯ ಕಾರ್ಯಕರ್ತರೊಂದಿಗೆ ಗಡಿಪಾರು ಕೇಸ ದಾಖಲು ಆದ ಶ್ರೀನಿವಾಸ್ ನಾಯ್ಕ್ ಮನೆಗೆ ಭೇಟಿ ನೀಡಿ ಧೈರ್ಯ ಅವರಿಗೆ ತುಂಬಿದರು.
ಕಾನೂನಾತ್ಮಕವಾಗಿ ಮುಂದಿನ ನಡೆಗೆ ಜಿಲ್ಲಾ ನ್ಯಾಯಾಲಯದ ವಕೀಲರೊಂದಿಗೆ ಮಾತನಾಡಿ ಎಲ್ಲಾ ರೀತಿಯಲ್ಲೂ ಕಾನೂನು ರೀತಿಯ ಹೋರಾಟ ಕ್ಕೆ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷರಾದ ಲಕ್ಷ್ಮಿನಾರಾಯಣ ನಾಯ್ಕ್, ನಾಮಧಾರಿ ಸಮಾಜದ ಮುಖಂಡರು ಹಿಂದೂ ಹೋರಾಟಗಾರರಾದ ಕೃಷ್ಣ ನಾಯ್ಕ ಆಸರಕೇರಿ, ವಕೀಲರು, ಭಟ್ಕಳ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾದ ರಾಜೇಶ್ ನಾಯ್ಕ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀನಿವಾಸ್ ನಾಯ್ಕ್, ಶ್ರೀಧರ್ ನಾಯ್ಕ್ ಅವರು ಉಪಸ್ಥಿತರಿದ್ದರು.