ಭಟ್ಕಳ ತಾಲೂಕ ಜೆಡಿಎಸ್ ಅಧ್ಯಕ್ಷರಾಗಿ ಈಶ್ವರ್ ನಾಯ್ಕ ಮುರುಡೇಶ್ವರ ಆಯ್ಕೆ
ಭಟ್ಕಳ- ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ,ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಜೆಡಿಎಸ್ ರಾಜ್ಯ ಅಧ್ಯಕ್ಷ , ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿರ್ದೇಶನದ ಮೇರೆಗೆ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಗಣಪಯ್ಯ ಗೌಡ ಅವರು ಭಟ್ಕಳ ತಾಲೂಕ ಜೆಡಿಎಸ್ ಅಧ್ಯಕ್ಷ ರನ್ನಾಗಿ ಮುರುಡೇಶ್ವರ ದ ಜನತಾ ಕಾಲನಿಯ ಈಶ್ವರ್ ಸುಬ್ರಾಯ ನಾಯ್ಕ ಅವರನ್ನು ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.ಆದೇಶದಲ್ಲಿ ಭಟ್ಕಳ ತಾಲೂಕಿನಲ್ಲಿ ತಾವು ಜೆಡಿಎಸ್ ಪಕ್ಷ ಸಂಘಟನೆ ಮತ್ತು ಬಲವರ್ಧನೆ ಶ್ರಮಿಸಬೇಕಾಗಿ ತಿಳಿಸಿದ್ದಾರೆ.